ವರಮಹಾಲಕ್ಷ್ಮೀ ಹಬ್ಬ; ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ

ವರಮಹಾಲಕ್ಷ್ಮೀ ಹಬ್ಬ; ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ

ಬೆಂಗಳೂರು,ಆ4: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ. ಬೆಂಗಳೂರು ನಗರ ಹಬ್ಬಕ್ಕೆ ಸಿದ್ಧವಾಗುತ್ತಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಇದರ ಜೊತೆಗೆ ಜನರ ಜೇಬಿಗೆ ಸಹ ಕತ್ತರಿ ಬೀಳುವಂತಿದೆ. ಎಂದಿನಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿದೆ.

ವರಮಹಾಲಕ್ಷ್ಮೀ ಹಬ್ಬದಲ್ಲಿ ಲಕ್ಷ್ಮೀ ದೇವಿ ಪೂಜಿಸಿದರೆ ವರ ದೇವಿ ಕರುಣಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಹಾಗಾಗಿ ಈ ಹಬ್ಬ, ವ್ರತ ಆಚರಿಸಲು ಜನ ಸಡಗರದಿಂದ ಎಲ್ಲ ತಯಾರಿ ಮಾಡಿಕೊಳ್ಳುತ್ತಾರೆ. ಹಬ್ಬದಲ್ಲಿ ಲಕ್ಷ್ಮೀಯ ಅನುಗ್ರಹಕ್ಕೆ ಜನರು ಸಂಭ್ರಮದಿಂದ ತಯಾರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತದೆ.

ಇನ್ನೂ ವರಮಹಾಲಕ್ಷ್ಮೀ ಹಬ್ಬ ಹೆಣ್ಣು ಮಕ್ಕಳಿಗೆ ನೆಚ್ಚಿನ ಹಬ್ಬ. ಹಬ್ಬಕಾಗಿಯೇ ಅವರು ತುಂಬಾ ಅಂದವಾಗಿ ತಯಾರಾಗುತ್ತಾರೆ. ಹಬ್ಬಕ್ಕಾಗಿ ಮನೆ ಎರಡು ವಾರಗಳ ಮುಂಚೆಯೇ ಸಿದ್ಧತೆ ಶುರುವಾಗುತ್ತದೆ. ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ತಯಾರಿಗಳು ಜೋತಾಗಿವೆ.

ರಸ್ತೆಗಳಲ್ಲಿ ವಾಹನ ದಟ್ಟಣೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ. ಆರ್. ಮಾರ್ಕೆಟ್​ನಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆದಿದೆ. ಮಾರುಕಟ್ಟೆಯಲ್ಲಿ ಜನಜಾತ್ರೆ ನೆರೆದಿದ್ದು, ಬೆಂಗಳೂರಿನ ಇತರ ಚಿಕ್ಕ ಚಿಕ್ಕ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದೆ. ಕೆ. ಆರ್. ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ಹಬ್ಬಕ್ಕಾಗಿ ವಸ್ತುಗಳನ್ನು ಕೊಳ್ಳಲು ಜನ ತರಾತುರಿಯಲ್ಲಿ ಸಿಟಿ ಮಾಕೆರ್ಟ್‌ ಕಡೆಗೆ ಬರತೊಡಗಿದ್ದಾರೆ. ಈ ಬಾರಿಯೂ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದ್ದಾರೆ.

ಹೂವುಗಳಲ್ಲಿ 50 ರಿಂದ 60 ರು.ವರೆಗೆ ಏರಿಕೆ ಹಬ್ಬದ ಸೀಸನ್‌ ಎಂದಿನಂತೆ ಕಳೆದ ಮೂರು ದಿನಕ್ಕೆ ಹೋಲಿಸಿದರೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಏರಿಕೆಯಾಗಿದೆ. ಹಣ್ಣುಗಳಲ್ಲಿ 30 ರಿಂದ 40 ಏರಿಕೆಯಾದರೆ, ಹೂವುಗಳಲ್ಲಿ 50ರಿಂದ 60 ರೂಪಾಯಿವರೆಗೆ ಏರಿಕೆ ಕಂಡು ಬಂದಿದೆ. ದರ ಎಷ್ಟೇ ಏರಿಕೆಯಾದರೂ ಸಹ ಹಬ್ಬದ ಖರೀದಿಗೆ ಸಿಲಿಕಾನ್ ಸಿಟಿ ಜನ ಮುಂದಾಗಿದ್ದಾರೆ. ಕೋವಿಡ್ ಹಿನ್ನಲೆ ಕಳೆದೆರಡು ವರ್ಷದಿಂದ ಸರಿಯಾಗಿ ಹಬ್ಬ ಆಚರಿಸದ ಜನರಿಗೆ ಈ ಬಾರಿ ಜೋರಾಗಿಯೇ ಹಬ್ಬ ಮಾಡುವ ಉತ್ಸಾಹದಲ್ಲಿದ್ದಾರೆ.

Related