ಮತ ಚಲಾಯಿಸಿದ ಲಿಂಬಾವಳಿ ಕುಟುಂಬ

ಮತ ಚಲಾಯಿಸಿದ ಲಿಂಬಾವಳಿ ಕುಟುಂಬ

ಮಹದೇವಪುರ: ಮತದಾನದ ಹಿನ್ನೆಲೆಯಲ್ಲಿ ಇಂದು ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಆಗಿರುವಂತಹ ಮಂಜುಳಾ ಅರವಿಂದ್ ಲಿಂಬಾವಳಿಯವರು ಕುಟುಂಬ ಸಮೇತವಾಗಿ ತಮ್ಮ ಮತ ಚಲಾಯಿಸಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸರ್ ಸಿ.ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಜೀವನ ಭೀಮ ನಗರ ನ್ಯಾಷಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಶಾಲೆಯ ಬೂತ್ ನಂ.173 ರಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಪತ್ನಿ- ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಪುತ್ರ ಮಯೂರ್ ಲಿಂಬಾವಳಿ, ಪುತ್ರಿ ರೇಣುಕಾ ಲಿಂಬಾವಳಿ ಸಮೇತ ಮತದಾನ ಮಾಡಿದರು.

Related