ಅಶ್ವಥ್ ನಾರಾಯಣ್ ರಾಜೀನಾಮೆಗೆ ಆಗ್ರಹಿಸಿದ ವಿ.ಎಸ್ ಉಗ್ರಪ್ಪ

ಬೆಂಗಳೂರು: ಸಚಿವ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಪಡೆಯಬೇಕು. ಪ್ರಧಾನಿಯವರೇ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಬೇಕೆಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯಿಸಿದ್ದಾರೆ.  

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವಾಗಿದೆ. ಸಹೋದರನನ್ನ ತನಿಖೆಗೆ ಕರೆದಿದ್ದಾರೆ. ಆಗ ಪ್ರಭಾವಿ ಸಚಿವರು ಕರೆ ಮಾಡಿ ಒತ್ತಡ ಹಾಕುತ್ತಾರೆ. ರಾಮನಗರ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್, ನಿಮ್ಮ ಆಟ್ಯಿಟ್ಯೂಡ್ ನೋಡಿದರೆ ಸಂಶಯ ಬರುತ್ತಿದೆ.ಇದರಲ್ಲಿ ನಿಮ್ಮ ಪಾತ್ರವೂ ಇರಬಹುದು. ಮಾಗಡಿಯಲ್ಲಿ ಮೂರರಿಂದ ಐದು ಜನ ರ್ಯಾಂಕ್ ಬಂದಿದ್ದಾರೆ. ಇದಕ್ಕೂ ಅಶ್ವಥ್ ನಾರಾಯಣ್  ಸಹೋದರ ಸತೀಶ್ ಗೂ ಲಿಂಕ್ ಇದೆ. ಮಾಗಡಿಯ ಜನ ಇದನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಅಶ್ವಥ್ ನಾರಾಯಣ್ ಈ ಹಿಂದೆ ಗಂಡಸ್ಥನದ ಬಗ್ಗೆ ಮಾತನಾಡಿದ್ರು, ಈಗ ನಿಮಗೆ ತಾಕತ್ ಇದ್ದರೆ, ಧಮ್ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ಸಿಟ್ಟಿಂಗ್ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಿ. ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದ್ದಾರೆ.

Related