ಟ್ರಂಪ್ ಫೇಸ್ ಬುಕ್ ಲ್ಲಿ ನಂ.1, ಮೋದಿ ನಂ. 2

ಟ್ರಂಪ್ ಫೇಸ್ ಬುಕ್ ಲ್ಲಿ ನಂ.1, ಮೋದಿ ನಂ. 2

ವಾಷಿಂಗ್ಟನ್,ಫೆ. 15 : ಸೋಷಿಯಲ್ ಮೀಡಿಯಾ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಗರ್ ಬರ್ಗ್ ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ನಲ್ಲಿ ನಂಬರ್ 1, ಭಾರತದ ಪ್ರಧಾನಿ ನರೇಂದ್ರ ಮೋದಿ ನಂಬರ್ 2 ಎಂದು ಹೇಳಿದ್ದರು.

ಈ ಸಂತಸದ ವಿಷಯವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಇನ್ನೆರಡು ವಾರಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ, ಅದಕ್ಕಾಗಿ ಕಾಯುತ್ತಿದ್ದೇನೆ, ನನ್ನ ಈ ಭಾರತ ಭೇಟಿ ಅತ್ಯಂತ ವಿಶೇಷವಾದದ್ದು ಎಂದಿದ್ದಾರೆ.ಮೊನ್ನೆಯಷ್ಟೇ ಟ್ರಂಪ್ ಅವರ ಪತ್ನಿ ಮಲಾನಿಯಾ ಟ್ರಂಪ್ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ಭಾರತ ಭೇಟಿಗೆ ಅತ್ಯಂತ ಸಂತಸಗೊಂಡಿರುವುದಾಗಿ ಹೇಳಿದ್ದರು.

Related