ರಾಜಾಜಿನಗರ ಮಂಡಲ ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ ಗೌರವ ಸಮರ್ಪಣೆ

ರಾಜಾಜಿನಗರ ಮಂಡಲ ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ ಗೌರವ ಸಮರ್ಪಣೆ

ರಾಜಾಜಿನಗರ: ಭೀಮ್ ರಾವ್ ಪ್ಯಾಲೇಸ್ ಸಭಾಂಗಣದಲ್ಲಿ ರಾಜಾಜಿನಗರ ಮಂಡಲ ಬಿಜೆಪಿ ವತಿಯಿಂದ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ.

ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮಂಡಲದ ಅಧ್ಯಕ್ಷರಾದ ರಾಘವೇಂದ್ರರಾವ್ ರವರು ಭಾರತಮಾತೆ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿದರು.

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ಮತದಾರರ ಮೇಲೆ ಗೌರವ ಹೆಚ್ಚಾಗಿದೆ. ಸ್ವಾಭಿಮಾನಿ ಕಾರ್ಯಕರ್ತರ ಸಭೆ ಇದು. ಮನೆ ಮನೆಗೆ ಭೇಟಿ ನೀಡಿದ ಕಾರಣದಿಂದ ನಿಮ್ಮ ಗೆಲುವು ಸಾಧ್ಯವಾಯಿತು ಎಂದು  ಬಿ.ಎಸ್.ಯಡಿಯೂರಪ್ಪರವರು ಹೇಳಿದರು.

ರಾಜಾಜಿನಗರ ಮತದಾರರ ಹಣ ಅಮಿಷಕ್ಕೆ ಒಳಗಾಗುವುದಿಲ್ಲ ಎಂದು ಚುನಾವಣೆಯಲ್ಲಿ ನಿರೂಪಿಸಿದ್ದಾನೆ. ಕಾಂಗ್ರೆಸ್ ಪಕ್ಷ ನೀಡಿದ ಸವಾಲಿಗೆ ಬಿಜೆಪಿ ಪಕ್ಷಕ್ಕೆ ಮತದಾರರು ತೀರ್ಪು ಕೊಟ್ಟಿದ್ದಾರೆ.

17ಸಾವಿರ ಮನೆಗಳಿಗೆ ಭೇಟಿ ನೀಡಲು ಕಾರ್ಯಕರ್ತರು ಬಹಳ ಸಹಕಾರ ನೀಡಿದರು, ಚುನಾವಣೆಯಲ್ಲಿ ನನ್ನ ಬಗ್ಗೆ ಅಪ್ರಚಾರ ಮಾಡಿದರು. ಕೊವಿಡ್ ನಿಂದ ಮೃತಪಟ್ಟ ನನ್ನ ಅಪ್ತಸಹಾಯಕ ಸಾವನ್ನು ಚುನಾವಣೆಯಲ್ಲಿ ಬಳಸಿಕೊಂಡರು. ಕಾಂಗ್ರೆಸ್ ಪಕ್ಷ ಕೀಳು ಮಟ್ಟದ ಸುಳ್ಳು ಪ್ರಚಾರ ಮಾಡಿದರು.

ಕಾಂಗ್ರೆಸ್ ಪಕ್ಷ ಜನತೆಗೆ ಮೋಸ ಮಾಡಿದರೆ ಅವರ ವಿರುದ್ದ ಹೋರಾಟ ಮಾಡಿ ಜನರ ಪರವಾಗಿ ನ್ಯಾಯ ಕೊಡಿಸುವಲ್ಲಿ ನಮ್ಮ ಹೋರಾಟ ನಿರಂತರ. ಕ್ರಾಂತಿ ಯೋಗಿ ಬಸವೇಶ್ವರರ ಸಿದ್ದಾಂತದಂತೆ ಎಲ್ಲರೂ ನಮ್ಮವರೆ ಎಂದು ಕೆಲಸ ಮಾಡುತ್ತೇನೆ.

ದೈವದುರ್ಲಭ ಕಾರ್ಯಕರ್ತ ಮತ್ತು ಕಾರ್ಯಕರ್ತರಿಗೆ ಋಣ ತೀರಿಸುವ ಕೆಲಸ ಮಾಡುತ್ತೇನೆ, ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ, ರಾಜಾಜಿನಗರ ಕ್ಷೇತ್ರದ ಜನಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು ಮಾತನಾಡಿ, ಸುರೇಶ್ ಕುಮಾರ್ ರವರ ಸರಳತೆ ಇಡಿ ರಾಜ್ಯಕ್ಕೆ ಗೊತ್ತು. ರಾಜ್ಯದ ನಂಬರ್ 1 ರಾಜಕಾರಣಿ ಎಂದು ಕೀರ್ತಿ ಪಡೆದಿದ್ದಾರೆ.

ಯಾವ ಶಾಸಕರು 17ಸಾವಿರ ಮನೆ ಭೇಟಿ ಮಾಡಿಲ್ಲ, ಸುರೇಶ್ ಕುಮಾರ್ ರವರ ಭೇಟಿ ನೀಡಿ ದಾಖಲೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಅಮಿಷ ಒಡಿದ್ದರು ಅದರೆ ಮತದಾರರ ಬಿಜೆಪಿ ಕೈ ಹಿಡಿದರು.

ಸುರೇಶ್ ಕುಮಾರ್ ರವರ ಗೆಲುವಿನಲ್ಲಿ ಬಿಜೆಪಿ ಕಾರ್ಯಕರ್ತರ ಕೊಡುಗೆ ಅಪಾರ. ಕೇಂದ್ರ, ರಾಜ್ಯ ಸರ್ಕಾರ ಮತ್ತು ಸುರೇಶ್ ಕುಮಾರ್ ರವರ ಸಾಧನೆಗಳನ್ನು ನೋಡಿ ಮತ ನೀಡಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರಮೋದಿ ರವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಮುನಿರಾಜು, ರಾಜಣ್ಣ, ಕೃಷ್ಣಪ್ಪ, ಶ್ರೀಮತಿ ಶಕೀಲ ಮುನಿರಾಜು ದೀಪಾ ನಾಗೇಶ್ , ಹಾಗೂ ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್,  ಸತೀಶ್ ಭಗವಾನ್ ,ಗಂಗಾಧರ್,ಕೇಶವ್ ಮೂರ್ತಿ ,ಯಶಸ್ ನಾಯಕ್, ಸಂಜಯ್ ಕುಮಾರ್,ಗಿರೀಶ್ ಗೌಡ, ಕಿರಣ್,ವೆಂಕಟೇಶ್ ಬಾಬು,ಆನಿಲ್ ರಂಗಣ್ಣ,ಮೋಹನ್ ರಾಜ್,ವೇಲು,ಪುಟ್ಟ  ಅಮಿತ್ ಜೈನ್, ಭಾಗವಹಿಸಿದ್ದರು

Related