ಇಂದು ಸರ್ಕಾರದ ವಿರುದ್ಧ ಕೇಸರಿ ರಣಕಹಳೆ

ಇಂದು ಸರ್ಕಾರದ ವಿರುದ್ಧ ಕೇಸರಿ ರಣಕಹಳೆ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳ ಬಾಕಿ ಇದ್ದು, ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಧ್ಯೆ ಜಾತಿಗಳ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹೌದು, ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ವಾಕ್ ಸಮರ ಜೋರಾಗಿದ್ದು ಇಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ರಾಮಜನ್ಮಭೂಮಿ ಹೋರಾಟದ ಕರಸೇವಕರ 31 ವರ್ಷದ ಹಿಂದಿನ ಕೇಸ್ ರೀ ಓಫನ್ ಮಾಡಿರೋ ವಿಚಾರ ಕಾಂಗ್ರೆಸ್- ಬಿಜೆಪಿ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕೇಸರಿಪಡೆ ಕೈ ಸರ್ಕಾರವನ್ನ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋ ಹಣೆಪಟ್ಟಿ ಕಟ್ಟಿ ಮುಸ್ಲಿಂ ತುಷ್ಠೀಕರಣ ಅಂತ ವ್ಯಂಗ್ಯವಾಡ್ತಿದೆ. ಇತ್ತ ಗೃಹ ಸಚಿವ ಪರಮೇಶ್ವರ್ ಕೇಸ್ ರೀ ಒಪನ್ ಗೆ ಸ್ಪಷ್ಟನೆ ಕೊಟ್ಟಿದ್ದು ಬಿಜೆಪಿಗೆ ಟಾಂಗ್ ಕೊಡ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟಕ್ಕೆ ವಿಜಯೇಂದ್ರ‌ ಕರೆ ಕೊಟ್ಟಿದ್ದು ಇಂದು ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ ಮೊಳಗಲಿದೆ.

ಇನ್ನು ಈ ಕೇಸ್ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಗೃಹ ಸಚಿವ ಜಿ ಪರಮೇಶ್ವರ್ ಬಿಜೆಪಿ ಆರೋಪಗಳಿಗೆ ಟಾಂಗ್ ಕೊಟ್ಟಿದ್ದಾರೆ. ಹಳೆಯ ಕೇಸ್ ಗಳನ್ನ ಕ್ಲಿಯರ್ ಮಾಡಿ ಅಂತ ಸೂಚನೆ ನೀಡಿದ್ದೆವು, ಅದರಂತೆ ಕ್ಲಿಯರ್ ಮಾಡಲು ಕೇಸ್ ಓಪನ್ ಮಾಡಿದ್ದಾರೆ. ಅದೊಂದೆ ಕೇಸ್ ಪ್ರತ್ಯೇಕವಾಗಿ ಏನೂ ಓಫನ್ ಮಾಡಿಲ್ಲ ಇದನ್ನ ರಾಜಕೀಯ ಉದ್ದೇಶದಿಂದ ಹೀಗೆ ಮಾಡೋದು ಸರಿಯಲ್ಲ. ಎಲ್ಲರಿಗೂ ಒಂದೇ ನ್ಯಾಯ, ಅದರಲ್ಲಿ ಹಿಂದೂಗಳು ಬಿಟ್ಟು ಬೇರೆ ಧರ್ಮದವರು ಇಲ್ವಾ ಎಂದು ಕೆಳೀದರು.

 

Related