ಬೀದಿಗೆ ಬಿದ್ದ ತಾಯಿ, ಐವರಿಗೆ ಗಂಭೀರ ಗಾಯ

ಬೀದಿಗೆ ಬಿದ್ದ ತಾಯಿ, ಐವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ,ಫೆ. 2 : ಹೆತ್ತ ತಾಯಿಯನ್ನು ಸಾಕುವ ವಿಚಾರದಲ್ಲಿ ಮಗ ಹಾಗೂ ಮಗಳ ಕುಟುಂಬಸ್ಥರ ಮಧ್ಯೆ ಮಾರಾಮಾರಿ ನಡೆದ ದೇವನಹಳ್ಳಿ ತಾಲೂಕಿನ ದೊಡ್ಡ ಸಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊಡ್ಡ ಸಾಗರಹಳ್ಳಿ ಗ್ರಾಮದ ಬಿಜುಮಾ ಎಂಬವರ ಮಗ ಇಮಾಂಸಾಬ್ ಹಾಗೂ ಮಗಳು ಜಂಗಮಾ ಕುಟುಂಬಸ್ಥರು ಮಧ್ಯೆ ಗಲಾಟೆಯಾಗಿದೆ. ವಯಸ್ಸಾಗಿದ್ದ ತಾಯಿ ಬಿಜುಮಾ ಕಳೆದ 15 ವರ್ಷಗಳಿಂದ ಮಗಳ ಜೊತೆಗೆ ವಾಸವಾಗಿದ್ದಾರೆ. ಆದರೆ ಇತ್ತೀಚೆಗೆ ಬಿಜುಮಾ ಅವರಿಗೆ ಬರುತ್ತಿದ್ದ ಪಿಂಚಣಿ ಹಣವನ್ನು ಮಗಳಾದ ಜಂಗುಮಾ ಪಡೆದುಕೊಳ್ಳುತ್ತಿದ್ದಾರೆ ಅಂತ ಇಮಾಂಸಾಬ್ ಹೆಂಡತಿ ನನ್ನಿಮಾ ಜಂಗುಮಾ ಕಂಡಾಗ ಗ್ರಾಮದಲ್ಲಿ ಬೈದಾಡಿ ತಿರುಗುತ್ತಿದ್ದಂತೆ. ಹೀಗಾಗಿ ತಮ್ಮ ಮನೆಯಲ್ಲಿದ್ದ ತಾಯಿಯನ್ನು ಮಗಳು ಜಂಗುಮಾ ತನ್ನ ಅಣ್ಣನಾದ ಇಮಾಂಸಾಬ್ ಮನೆಗೆ ಹೋಗುವಂತೆ ಕಳುಹಿಸಿ ಬಿಟ್ಟಿದ್ದಾಳೆ.

Related