ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

ಚಿಕ್ಕನಾಯಕನಹಳ್ಳಿ:ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಹಿಂದುಳಿದ ಜನಾಂಗದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದೇನೆ ಎಂದು ಕಾಡುಗೊಲ್ಲ ಜನಾಂಗದ ಮುಖಂಡ ಡಿ.ಟಿ ಶ್ರೀನಿವಾಸ್ ತಿಳಿಸಿದರು.
ಅವರು ಪದವೀಧರ ಕ್ಷೇತ್ರದ ಪ್ರಚಾರದನ್ವಯ ಪಟ್ಟಣಕ್ಕೆ ಆಗಮಿಸಿ ತಮ್ಮ ಬೆಂಬಲಿಗರೊಂದಿಗೆ ಮತಯಾಚಿಸಿ ಮಾತನಾಡಿ ಕಳೆದ ೯ ತಿಂಗಳಿಂದ ಆಗ್ನೇಯ ಪದವೀಧರ ಕ್ಷೇತ್ರದ ಐದು ತಾಲ್ಲೂಕುಗಳಲ್ಲಿ ಸಂಚರಿಸಿ ಮತದಾರರನ್ನು ಸಂಘಟಿಸಿ ಪೂರ್ವ ತಯಾರಿ ಮಾಡಿಕೊಂಡಿದ್ದೆ. ಇದುವರೆಗೆ ೩೧ ತಾಲ್ಲೂಕಿನಲ್ಲಿ ಸಂಚರಿಸಿ ೪೪ ಸಾವಿರ ಪಧವೀಧರ ಮತದಾರರನ್ನು ನೊಂದಣಿ ಮಾಡಿರುತ್ತೇನೆ. ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಕ್ರಿಯಾಶೀಲತೆಯಿಂದ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೆ ಬಿಜೆಪಿಯಿಂದ ಟಿಕೆಟ್‌ನ ಭರವಸೆ ಹುಸಿಯಾದ ಹಿನ್ನಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಇರುತ್ತೇನೆ. ೭ರಂದು ನಾಮಪತ್ರ ಸಲ್ಲಿಸುತ್ತೇನೆ. ಶಿಕ್ಷಕರ ಹಲವು ಸಮಸ್ಯೆಗಳನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದು ನನ್ನ ಪ್ರವಾಸದ ಕಾಲದಲ್ಲಿ ಆಯಾ ಪ್ರಾಂತ್ಯದ ಶಿಕ್ಷಕ ಬಂಧುಗಳ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡಿದ್ದೇನೆ, ಜಾತಿ, ಪಕ್ಷ, ಧರ್ಮಗಳನ್ನು ಮೀರಿಎಲ್ಲಾ ಅಹಿಂದ ಮತದಾರರು ನನ್ನನ್ನು ಈ ಸಂದರ್ಭದಲ್ಲಿ ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ.
ಇದೇ ಉತ್ಸಾಹ ಚುನಾವಣೆಯಲ್ಲಿಯೂ ಮುಂದುವರೆದು ನನಗೆ ಮತ ಹಾಕುವ ಮೂಲಕ ಜಯಶೀಲನನ್ನಾಗಿಸಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಂಡ ಬೇಕೆಂದುಕೋರಿದರು. ಈ ಸಂದರ್ಭದಲ್ಲಿ ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್ ಶಿರಾ ತಾಲ್ಲೂಕಿನಿಂದ ಆಗಮಿಸಿದ್ದ ಹಲವುಪದವೀಧರ ಬೆಂಬಲಿಗರು ಜೊತೆಯಲ್ಲಿದ್ದರು.

Related