ಈ ಹೂವುನಲ್ಲಿದೆ ಅನೇಕ ಔಷಧೀಯ ಗುಣಗಳು

ಈ ಹೂವುನಲ್ಲಿದೆ ಅನೇಕ ಔಷಧೀಯ ಗುಣಗಳು

ದಾಸವಾಳ ಹೂವು ತನ್ನ ಒಡಲಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಹಲವಾರು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ಈ ಹೂವು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ರಕ್ಷಣೆ ಕೊಡುವ ಆಹಾರವಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಎಲ್ಲಾ ರೀತಿಯಲ್ಲೂ ಮಾನವನಿಗೆ ಉಪಯುಕ್ತವಾಗಿರುವ ದಾಸವಾಳ ಹೂವಿನಿಂದ ಹೃದಯಕ್ಕೆ ಏನೆಲ್ಲಾ ಉಪಯೋಗ ಸಿಗುತ್ತದೆ ಎಂಬುದನ್ನು ತಿಳಿಯೋಣ .

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ದಾಸವಾಳವು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿದೆ. ‘ಜರ್ನಲ್​ ಆಫ್​ ನ್ಯೂಟ್ರೀಶನ್​’ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ದಾಸವಾಳದ ಚಹಾವನ್ನು ಕುಡಿಯುವುದರಿಂದ ಸಿಸ್ಟೋಲಿಕ್​ ರಕ್ತದೊತ್ತಡ ಕಡಿಮೆಯಾಗುತ್ತದೆ. ಜತೆಗೆ ಡಯಾಸ್ಟೋಲಿಕ್​ ರಕ್ತದೊತ್ತಡವನ್ನೂ ಕಡಿಮೆ ಮಾಡುವಲ್ಲಿ ಸಹಕಾರಿ ಎಂಬುದು ತಿಳಿದು ಬಂದಿದೆ.

ಕೊಲೆಸ್ಟ್ರಾಲ್​ ಮಟ್ಟ ತಗ್ಗಿಸುತ್ತದೆ

ಜರ್ನಲ್​ ಆಫ್​ ಆಲ್ಟರ್ನೇಟಿವ್​ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್​’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಾಸವಾಳ ಚಹಾದ ಸೇವೆನೆಯಿಂದ ಕೊಲೆಸ್ಟ್ರಾಲ್​ ಮಟ್ಟವನ್ನು ಶೇ.22 ರಷ್ಟು ಕಡಿಮೆ ಮಾಡುತ್ತದೆ.

ದಾಸವಾಳವು ಹೃದ್ರೋಗ ಸೇರಿದಂತೆ ವಿವಿಧ ರೋಗಗಳನ್ನು ಉಂಟು ಮಾಡುವ ಜೀವಕೋಶಗಳನ್ನು ನಾಶಪಡಿಸಲು ಸಹಕಾರಿಯಾಗಿದೆ. ಹೀಗಾಗಿ ವೈದ್ಯರ ಸಲಹೆ ಪಡೆದು ದಾಸವಾಳ ಚಹಾ ಸೇವಿಸುವುದನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಂಡುಕೋಳ್ಳಲು ಸಾಧ್ಯ.

Related