ಚಿನ್ನ ತಗೊಳೋಕೆ ಮುನ್ನಾ ಯೋಚಿಸಿ

ಚಿನ್ನ ತಗೊಳೋಕೆ ಮುನ್ನಾ ಯೋಚಿಸಿ

ಹುಬ್ಬಳ್ಳಿ : ಪ್ರಸ್ತುತ ದಿನಗಳಲ್ಲಿ ಬಂಗಾರ ಗಗನಕ್ಕೇರಿದೆ. ಜನಸಾಮಾನ್ಯರು ಖರೀದಿಸೋದು ಗಗನ ಕುಸುಮವಾಗಿದೆ. ಇಂತಹ ಸಂದರ್ಭದಲ್ಲಿ ಅರ್ಧಕ್ಕರ್ಧ ಕಡಿಮೆ ಬೆಲೆಯಲ್ಲಿ ಬಂಗಾರ ಕೊಡ್ತೀವಿ ಅಂದ್ರೇ ಯಾರ್ ತಾನೆ ಮನಸ್ಸು ಮಾಡೋದಿಲ್ಲ ಹೇಳಿ.? ಹೀಗೆ ಮನಸ್ಸು ಮಾಡಿ, ದುಡ್ಡು ಹೊಂದಿಸಿ, ಕಡಿಮೆ ಬೆಲೆಗೆ ಬಂಗಾರ ತಗೊಂಡು ಬರೋಕೆ ರೆಡಿಯಾಗಿದ್ದರೇ.. ಸ್ವಲ್ಪ ನಿಲ್ಲಿ.. ಕೊಂಚ ಯೋಚಿಸಿ.

ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಸುರೇಶ್ ಟಿ ವೆಂಕಟಪ್ಪ ಎನ್ನುವವರನ್ನು ಪರಿಚಯ ಮಾಡಿಕೊಂಡ ಒಂದು ಗುಂಪು, ತಮ್ಮ ಅಜ್ಜನಿಗೆ ಬಂಗಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದಾರೆ.

ಇದನ್ನು ನಂಬಿದ ಸುರೇಶ್, ಎಷ್ಟು ಚಿನ್ನವಿದೆ..? ಎಷ್ಟು ಹಣ ಕೊಡಬೇಕು ಅಂತ ಕೇಳಿಕೊಂಡಾಗ, ದರೋಡೆ ಕೋರರ ಗುಂಪು ಅರ್ಧ ಕೆಜಿ ಇದೆ. 5.50 ಲಕ್ಷಕ್ಕೆ ಕೊಡುತ್ತೇವೆ ಎಂಬುದಾಗಿ ತಿಳಿಸಿದೆ. ದರೋಡೆಕೋರರು ಹೇಳಿದ ಜಾಗಕ್ಕೆ ಸುರೇಶ್ ಹಾಗೂ ವಿಜಯ ಭಾಸ್ಕರ್ ತಗೊಂಡು ಹೋಗಿದ್ದಾರೆ.

ತಾರಿಹಾಳದ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದ ದರೋಡೆ ಕೋರರು, 5.50 ಲಕ್ಷ ಹಣ, ವಿಜಯಭಾಸ್ಕರ್ ಬಳಿಯಲ್ಲಿದ್ದಂತ 4 ಸಾವಿರ ರೂ ಹಣ ಕಿತ್ತುಕೊಂಡಿದ್ದಾರೆ. ಅಲ್ಲದೇ ನಮ್ಮ ಕೃತ್ಯ ಎಲ್ಲಿ ಬಯಲಾಗುತ್ತೋ ಎಂಬುದಾಗಿ ವಿಜಯಭಾಸ್ಕರ್ ಅವರ ಮೊಬೈಲ್ ನಾಶ ಪಡಿಸಿದ್ದಲ್ಲದೇ, ಸಿಮ್ ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಪ್ರಕರಣ ಚನ್ನಪಟ್ಟಣ ಗ್ರಾಮೀಣ ಠಾಣೆ ಪೊಲೀಸರು ತಂಡವನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. ವರೂರಿನ ಖಾಸಗಿ ಸಂಸ್ಥೆಯ ವರ್ಕ್ ಶಾಪ್ ಬಳಿ ಅನುಮಾನಾಸ್ಪದವಾಗಿ ಕಾರು, ಬೈಕ್ ನಲ್ಲಿ ತಿರುಗಾಡುತ್ತಿದ್ದಂತ ಆರು ಜನರನ್ನು ವಶಕ್ಕೆ ಪಡೆದು ಪೊಲೀಸ್ ವಿಚಾರಿಸಿದಾಗ ದರೋಡೆ ಮಾಡಿದ್ದರ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

Related