ಅಧ್ಯಕ್ಷ ಸ್ಥಾನ ತಿಮ್ಮರಾಯಪ್ಪಗೆ ಖಚಿತ

ಅಧ್ಯಕ್ಷ ಸ್ಥಾನ ತಿಮ್ಮರಾಯಪ್ಪಗೆ ಖಚಿತ

ಮಧುಗಿರಿ: ಮೀಸಲಾತಿ ಪ್ರಕಟ :ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಪುರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು , ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಪ್ರಕಟವಾಗಿದೆ.
ಕಾಂಗ್ರೆಸ್ ಬಲವಿರುವ ಪುರಸಭೆಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ತಿಮ್ಮರಾಯಪ್ಪ ಹಾಗೂ ಅವರ ಹತ್ತಿರದ ಸಂಬಂಧಿಯಾದ ಪಾರ್ವತಮ್ಮ ಎಂಬ ಮಹಿಳೆಯು ಕಳೆದೆರಡು ವರ್ಷಗಳ ಹಿಂದೆಯೇ ನಡೆದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವೂ ಮೀಸಲಾತಿಯ ಬಗ್ಗೆ ಕೋರ್ಟ್ ಮೆಟ್ಟಲೇರಿತ್ತು.
ಈ ಮಧ್ಯೆ ತಿಮ್ಮರಾಯಪ್ಪ ಕೆ.ಎನ್. ರಾಜಣ್ಣನವರ ನಾಯಕತ್ವದ ಪ್ರಭಾವದಿಂದಾಗಿ ಜೆಡಿಎಸ್ ತೊರೆದು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಪಕ್ಷದಿಂದ ಏಕೈಕ ಅಭ್ಯರ್ಥಿಯಾಗಿ ತಿಮ್ಮರಾಯಪ್ಪರವರು ಸ್ಪರ್ಧಿಸಲಿದ್ದು ಎದುರಾಳಿ ಇಲ್ಲದೆ ಬಹುಮತದಿಂದ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಹೊತ್ತಿರುವ ಸುತ್ತೋಲೆ ಹೊರಬರುತ್ತಲೇ ತಿಮ್ಮರಾಯಪ್ಪ ಆಯ್ಕೆ ಖಚಿತ ಎಂದು ತಿಳಿದ ತಕ್ಷಣ ನೂರಾರು ಕಾಂಗ್ರೆಸ್ ಅಭಿಮಾನಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರು ತಿಮ್ಮರಾಯಪ್ಪನವರ ಬಳಿಬಂದು ಹಾರ ಹಾಕಿ ಶುಭಕೋರಿದರು.
ಮೊದಲಿನಿಂದಲೂ ಸಾರ್ವಜನಿಕರು ತಿಮ್ಮರಾಯಪ್ಪನವರು ಎಲ್ಲ ಸಮುದಾಯದ ಜನರನ್ನು ಒಟ್ಟುಗೂಡಿಸಿ ಕರೆದೊಯ್ಯುವ ಸಾಮರ್ಥ್ಯ ಈತನಲ್ಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಉಪಾಧ್ಯಕ್ಷ ಸ್ಥಾನವೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್ ಪಕ್ಷದವರಿಗೆ ಒಲಿಯುವುದು ಖಚಿತವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಏಳೆಂಟು ಮಹಿಳೆಯರು ರೇಸ್‌ದ್ದಾರೆ. ಅದೃಷ್ಟಲಕ್ಷ್ಮಿ ಯಾರಿಗೆ ಒಲಿಯುವುದು ಕಾದುನೋಡಬೇಕಾಗಿದೆ….?

Related