ಸಿರಿಧಾನ್ಯ ಮೇಳಕ್ಕೆ ಸಿರಿಯೇ ಇಲ್ಲ!

ಸಿರಿಧಾನ್ಯ ಮೇಳಕ್ಕೆ ಸಿರಿಯೇ ಇಲ್ಲ!

ಯಾದಗಿರಿ: ಯಾದಗಿರಿ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯ ಮೇಳಕ್ಕೆ ರೈತರು ಹಾಗೂ ಸಾರ್ವಜನಿಕರು ಇಲ್ಲದೇ ಯಾರಿಗಾಗಿ ಈ ಮೇಳ ಎಂಬಂತಿದ್ದ ದೃಶ್ಯ ಕಂಡು ಬಂದಿತು.

2 ದಿನಗಳ ಕಾಲ ಆಯೋಜಿಸಲಾಗಿದ್ದ ಸಿರಿಧಾನ್ಯ ಮೇಳಕ್ಕೆ ಸಿರಿಯೇ ಇಲ್ಲದೇ, ಎಲ್ಲಿದೆ ಮೇಳ ಎನ್ನುವಂತಾಗಿತ್ತು. ಇನ್ನೂ ಆಯೋಜಿಸಲಾಗಿದ್ದ ಸ್ಟಾಲ್‌ಗಳು ಸಿಬ್ಬಂದಿಗೆ ಮಾತ್ರ ಸೀಮಿತ ಎಂಬಂತೆ ಬಿಂಬಿತವಾಗಿತ್ತು. ಈ ಮೇಳಕ್ಕೆ ಸರ್ಕಾರದಿಂದ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ರೈತರಿಗೆ ಹಾಗೂ ಜನಸಾಮಾನ್ಯರ ಸಿರಿಧಾನ್ಯ ಹಾಗೂ ವಿವಿದ ಸಸಿಗಳ ಮಾಹಿತಿ ಪಡೆಯಲು ಬಂದವರು ಮಾತ್ರ 74 ಜನ ಮಾತ್ರ ಇದ್ದು, ಒಂದು ಜಿಲ್ಲೆಯಲ್ಲಿ ಸರ್ಕಾರದಿಂದ ಹಣ ವ್ಯಯ ಮಾಡಲು ಕಾರ್ಯಕ್ರಮ ಮಾಡಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.

ಸರ್ಕಾರದ ದುಡ್ಡಲ್ಲಿ ಅಚ್ಚುಕಟ್ಟಾಗಿ ಮೇಳ ಆಯೋಜನೆ ಮಾಡಲು ರೈತರಿಗೆ ಹಾಗೂ ಸಾರ್ವಜನಿಕರಿಗೆ ವ್ಯವಸ್ಥಿತವಾದ ಮೇಳ ಆಯೋಜನೆ ಮಾಡಿದರೆ ಸಾರ್ಥಕವಾಗುತ್ತಿತ್ತು. ಒಟ್ಟಿನಲ್ಲಿ ಸರ್ಕಾರದಿಂದ ಹಣ ವಿನಿಯೋಗ ಮಾಡಿ ರೈತರ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಆಯೋಜನೆ ಮಾಡಿದ ಸಿರಿಧಾನ್ಯ ಮೇಳ ಕಾಟಾಚಾರಕ್ಕೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

Related