ಎರಡು ತಿಂಗಳಿನಿಂದ ಮಾಶಾಸನವಿಲ್ಲ

ಎರಡು ತಿಂಗಳಿನಿಂದ ಮಾಶಾಸನವಿಲ್ಲ

ಮುದ್ದೇಬಿಹಾಳ : ಕಳೆದ ಎರಡು ತಿಂಗಳಿನಿಂದ ವೃದ್ಧಾಪ್ಯ ಮಾಶಾಸನ ಬಂದಿಲ್ಲವೆAದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎದುರಿಗೆ ವೃದ್ಧೆಯೊಬ್ಬರು ಅಳಲು ತೋಡಿಕೊಂಡ ಘಟನೆ ತಾಲೂಕಿನ ಯರಝರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಶಾಲೆಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಯರಝರಿ ಗ್ರಾಮದ ಸಿದ್ಧವ್ವ ಹೊಸಮನಿ ಎಂಬ ವೃದ್ಧೆ ತನಗೆ ಎರಡು ತಿಂಗಳ ಮಾಶಾಸನ ಬರಬೇಕು ಎಂದು ಗೋಳು ತೋಡಿಕೊಂಡಳು. ತಕ್ಷಣ ಶಾಸಕರು ವೃದ್ಧೆಯ ಕೈಯ್ಯಲ್ಲಿದ್ದ ಪಾಸ್ ಬುಕ ಪರಿಶೀಲನೆ ನಡೆಸಿದರು.

ಅಲ್ಲದೇ ಆಕೆಗೆ 1000 ರೂ. ವಯಕ್ತಿಕ ಧನ ಸಹಾಯವನ್ನು ಮಾಡಿದರು.ಎರಡು ದಿನಗಳಲ್ಲಿ ಬಾಕಿ ಮಾಶಾಸನದ ಹಣವನ್ನು ಅಧಿಕಾರಿಗಳ ಮೂಲಕ ಖಾತೆಗೆ ಜಮಾ ಮಾಡಿಸುವುದಾಗಿ ತಿಳಿಸಿದರು.

Related