ರಾಜ್ಯದಲ್ಲಿ ಮತ್ತೊಂದು ಟ್ರಾನ್ಸ್ಫರ್ ಮಾಫಿಯಾ ನಡಿತಿದೆ: ಸಿ ಅಶ್ವತ್ ನಾರಾಯಣ್

ರಾಜ್ಯದಲ್ಲಿ ಮತ್ತೊಂದು ಟ್ರಾನ್ಸ್ಫರ್ ಮಾಫಿಯಾ ನಡಿತಿದೆ: ಸಿ ಅಶ್ವತ್ ನಾರಾಯಣ್

ಬೆಂಗಳೂರು: ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಬಿಜೆಪಿಯವರ ವಿರುದ್ಧ ಇಲ್ಲದ ಸಲದ ಆರೋಪಗಳನ್ನು ಮಾಡಬಹುದು ಆದರೆ ಸ್ವತಃ ನಿಮ್ಮ ಮಗನಾದ ಯತಿಂದ್ರನವರು ಮಾಡಿರುವ ಆರೋಪ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿ ಅಶ್ವತ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದವರು, ಈ ಸರ್ಕಾರದಲ್ಲಿ ಮತ್ತೊಂದು ಟ್ರಾನ್ಸ್ಫರ್ ಮಾಫಿಯಾ, ಎಟಿಎಂ ಸರ್ಕಾರ ಎನ್ನುವುದು ಎದ್ದು ಕಾಣುತ್ತಿದೆ. ಅಧಿಕಾರ ದೌರ್ಬಳಕೆ ನಡೆಯುತ್ತಿದೆ.  ಯಾವ ಕಾನೂನಿಗೆ ಯಾವ ವ್ಯವಸ್ಥೆಗೆ ಗೌರವವಿಲ್ಲದೆ, ಈ ರೀತಿ ವ್ಯವಸ್ಥೆ ನಡೆಯುತ್ತಿರುವುದು ಬಹಳ ಸ್ಪಷ್ಟವಾಗಿ ಕಣ್ಣ ಮುಂದೇನೆ ಸಿಕ್ಕಿರುವಂತಹ ಸಾಕ್ಷಿ ಇದಾಗಿದೆ.

ಇದಕ್ಕೆ ಕ್ರಮ ಆಗಬೇಕು, ಇದಕ್ಕೆ ಎನ್ಕ್ವೈರಿ ಆಗ್ಬೇಕು, ಸನ್ಮಾನ್ಯ ಸಿದ್ದರಾಮಯ್ಯ ಅವರು ಯಾವ ಸಮಾಜದಲ್ಲಿ ಪಾರದರ್ಶಕತೆಯ ಬಗ್ಗೆ ಮಾತನಾಡುತಿದ್ರು, ಅಕೌಂಟಬಿಲಿಟಿ ಬಗ್ಗೆ ಮಾತನಾಡುತಿದ್ರು, ಅಧಿಕಾರ ದುರ್ಬಲತೆಯ ಬಗ್ಗೆ ಮಾತನಾಡುತಿದ್ರು ಬ್ರಷ್ಟಾಚಾರದ ಬಗ್ಗೆ ಮಾತನಾಡುತಿದ್ರು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು, ಉತ್ತರವೇನು?. ಇದನ್ನ ತಳ್ಳಿ ಹಾಕ್ತಿದ್ದೀರಾ ಅಥವಾ ಕಾನೂನಿನಲ್ಲಿ ಕ್ರಮ ತಗೊಳ್ತೀರಾ, ಅಥವಾ ರಾಜೀನಾಮೆ ಕೊಡ್ತೀರಾ. ಈ ರೀತಿ ನಿಮ್ಮ ಮನೆಯಲ್ಲಿಯೇ ಅಧಿಕಾರ ದೌರ್ಬಳಕೆ ಆಗುತ್ತಿರುವುದು ಕಾನೂನು ಪ್ರಕಾರವಾಗಿ ಎಷ್ಟು ಸರಿ ಇದೆ ಎಂದು ನೀವು ಉತ್ತರ ನೀಡಬೇಕಾಗಿದೆ.  ಕಣ್ಣು ಮುಂದೆ ಸಿಕ್ಕಿರುವಂತಹ ಈ ಸಾಕ್ಷಿ ಆಧಾರಿತವಾಗಿ ಯತಿಂದ್ರ ಸಿದ್ದರಾಮಯ್ಯರವರ ಮೇಲೆ ಕ್ರಮ ಆಧರಿಸಬೇಕು ಎಂದು ಸಿ ಅಶ್ವತ್ ನಾರಾಯಣ್ ಹೇಳಿದ್ದಾರೆ.

Related