ಈ ಊರಲ್ಲಿ ನೀರಿಗೆ ನೂರಾರು ಬಿಂದಿಗೆಗಳೊಂದಿಗೆ ಬಾಯ್ತೆರೆದು ಕುಳಿತಿರುತ್ತಾರೆ

  • In State
  • April 4, 2020
  • 478 Views
ಈ ಊರಲ್ಲಿ ನೀರಿಗೆ ನೂರಾರು ಬಿಂದಿಗೆಗಳೊಂದಿಗೆ ಬಾಯ್ತೆರೆದು ಕುಳಿತಿರುತ್ತಾರೆ

ಪಾವಗಡ, ಏ. 04:  ಈ ಊರ ಜನ ನೀರಿಗಾಗಿ ಕಳೆದ ಎಂಟು ತಿಂಗಳಿನಿಂದ ಪರದಾಡುತ್ತಿದ್ದಾರೆ. ಮನೆ ಮುಂದೆ ನೀರು ಸಿಗದೆ ಎಷ್ಟೋ ತಿಂಗಳು ಕಳೆದಿವೆ. ತಾಲ್ಲೂಕಿನ ಗುಜ್ಜನ್ನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕುರಿಕೆ  ಗ್ರಾಮದಲ್ಲಿ ಎಂಟು ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲಿ ಕುಟುಂಬದ ಒಬ್ಬರು ಅಥವ ಇಬ್ಬರು ನೀರು ಸಂಗ್ರಹಿಸುವ ಕಾರ್ಯವನ್ನೇ ಇಡೀ ದಿನ ಮಾಡಬೇಕಾಗಿದೆ. ಜನಪ್ರತಿನಿಧಿಗಳು ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು. ಬಡವರು, ಮಧ್ಯಮ ವರ್ಗದವರ ಬಡಾವಣೆಗಳಿಗೆ ಬರುವ ಟ್ಯಾಂಕರ್ ನೀರಿಗೆ ನೂರಾರು ಬಿಂದಿಗೆಗಳೊಂದಿಗೆ ಬಾಯ್ತೆರೆದು ಕುಳಿತಿರುತ್ತಾರೆ.

ಜನ ಟ್ಯಾಂಕರ್ ಬಂದಾಕ್ಷಣ ಮುಗಿಬೀಳುತ್ತಾರೆ. ನೂಕಾಟ-ತಳ್ಳಾಟ, ಹೊಡೆದಾಟ ಸಾಮಾನ್ಯ. ಇನ್ನು ಬೆಳಗಾದರೆ ಕೆಲಸಕ್ಕೆ ತೆರಳುವ ಮಹಿಳೆಯರ ಪಾಡು ಹೇಳತೀರದು. ಉದ್ಯೋಗಸ್ಥ ಪೋಷಕರು ನೀರು ಹಿಡಿದು ತರುವ ಹೊಣೆಯನ್ನು ವೃದ್ಧರು, ಶಾಲೆ ಮಕ್ಕಳಿಗೆ ವಹಿಸಿ ಹೋಗುವುದುಂಟು. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಗ್ರಾಮಸ್ಥರಿಗೆ ನೀರು ಸಾಕಾಗುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬೇಸಿಗೆ ಕಾಲದಲ್ಲಿ  ಟ್ಯಾಂಕರ್‌ ಮೂಲಕ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜನರು ಕೆಲಸ ಕಾರ್ಯಗಳನ್ನು ಬಿಟ್ಟು ನೀರಿನ ಟ್ಯಾಂಕರ್‌ಗಳಿಗೆ ಕಾಯುವಂತಾಗಿದೆ. ಸಕಾಲಕ್ಕೆ ಮಳೆಯಾಗದಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿಗೆ ಆಹಾಕಾರ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ

ಊರಿನ ಎಲ್ಲಾ ಕೊಳವೆ ಬಾವಿಗಳು ಬತ್ತಿ ಹೋಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು ಎರೆಡು ತೊಟ್ಟಿಗಳು ಇರುವ ಜಾಗದಲ್ಲಿ ಹೊಸದಾಗಿ ನೀರಿನ ಡ್ರಮ್ ಕಾಮಗಾರಿ ಮಾಡಿರುವುದು ಅದು ಊರು ಬಿಟ್ಟು ಅರ್ಧ ಕಿಮೀ ದೂರದಲ್ಲಿ, ಅಲ್ಲಿ ಅವಶ್ಯಕತೆಯೂ ಇಲ್ಲ ದೇವಸ್ಥಾನವಿದೆ ಅಲ್ಲಿ ವರ್ಷಕ್ಕೆ ಒಮ್ಮೆ ಪೂಜೆ ನಡೆಯುತ್ತದೆ ನೀರಿನ ಅವಶ್ಯಕತೆ ಇಲ್ಲ ದನ ಕರುಗಳಿಗಾಗಿ ನೀರಿನ ತೊಟ್ಟಿ ಇದ್ದರು ಈಗಷ್ಟೇ ಡ್ರಮ್ ಕಟ್ಟಿರುವುದು ಇದು ಯಾವ ನ್ಯಾಯ ಸ್ವಾಮಿ ಎಂದು  ಹಳ್ಳಿಯ ಜನರ  ಮಾತಾಗಿದೆ.

 

Related