ಯುವತಿ ನೇಣಿಗೆ ಶರಣು

ಯುವತಿ ನೇಣಿಗೆ ಶರಣು

ಮಡಿಕೇರಿ, ಫೆ. 24 : ಯುವತಿಯೊಬ್ಬಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಳ್ಳೇಕೆರೆಯಲ್ಲಿ ನಡೆದಿದೆ. ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ನೋಟ್ ಬರೆದಿದ್ದಾಳೆ.
ಅನಾರೋಗ್ಯದಿಂದ ಬಳಲುತ್ತಿದ್ದ ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಿದ್ದಾಪುರದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ರಂಜಿತಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಏನಿದೆ ಡೆತ್ನೋಟ್ನಲ್ಲಿ?
ನನ್ನ ಸಾವಿಗೆ ಯಾರು ಕಾರಣ ಅಲ್ಲ. ನನ್ನ ಕುಟುಂಬದಲ್ಲಿ ನಡೆಯುವುದನ್ನು ನೋಡಿಯೇ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಎಲ್ಲರಿಗೂ ಕಷ್ಟವನ್ನು ಕೊಡುತ್ತಿದ್ದೇನೆ. ನನ್ನಿಂದ ಯಾರು ಕಷ್ಟ ಪಡಬಾರದು. ಅಪ್ಪ ಅಮ್ಮ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ಎಲ್ಲಾ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

Related