ಅಂಗಡಿಗಳು ಸಂಪೂರ್ಣ ಬಂದ್: ರಸ್ತೆ ಖಾಲಿ ಖಾಲಿ

ಅಂಗಡಿಗಳು ಸಂಪೂರ್ಣ ಬಂದ್: ರಸ್ತೆ ಖಾಲಿ ಖಾಲಿ

ಅಣ್ಣಿಗೇರಿ : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ನೈಟ್ ಕರ್ಫ್ಯೂ ಜಾರಿಗೆ ತಂದಿದ್ದು, ನಗರದಲ್ಲಿ ಅಂಗಡಿ-ಮುಂಗಟ್ಟುಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಟ್ಟಿದ್ದವು.ಯಾವಾಗಲೂ ಜನಜಂಗುಳಿಯಿAದ ಕೂಡಿರುತ್ತಿದ್ದ ನಗರದ ಮಾರ್ಕೆಟ್, ರಾತ್ರಿ 9 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತ್ತು. ಮೆಡಿಕಲ್ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದಾಗಿದ್ದವು.
ತಾಲೂಕಿನ ಪಿಎಸ್‌ಐ ಲಾಲಸಾಬ ಜೂಲಿಕಟ್ಟಿ ಹಾಗೂ ಮತ್ತೊಬ್ಬ ಪಿಎಸ್‌ಐ ಬಿ.ಕೆ. ಹೂಗಾರ್ ರಾತ್ರಿವೇಳೆ ನಗರದಲ್ಲಿ ಸಂಚರಿಸಿ ತೆರೆದಿರುವ
ಅಂಗಡಿಗಳನ್ನು ಬಂದ್ ಮಾಡಿಸಿ, ಸೆಕ್ಷನ್ 144 ಜಾರಿ ಇರುವುದರಿಂದ ಗುಂಪುಗೂಡಿದ್ದ ಜನರನ್ನು ಚದುರಿಸಿ, ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಹೇಳಿದರು.
ಅಲ್ಲದೇ ಧ್ವನಿವರ್ಧಕದ ಮೂಲಕ ಹೊರಗಡೆ ಯಾರು ಬರಬಾರದು, ಓಡಾಡಬಾರದು ಹಾಗೂ ಕೊರೋನ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಜನರಿಗೆ ಜಾಗೃತಿ ಮೂಡಿಸಿದರು.

Related