ನಾಡು ನುಡಿ ಉಳಿವಿಗೆ ಪ್ರಾದೇಶಿಕ ಪಕ್ಷ ಅವಶ್ಯ

ನಾಡು ನುಡಿ ಉಳಿವಿಗೆ ಪ್ರಾದೇಶಿಕ ಪಕ್ಷ ಅವಶ್ಯ

ಚಿಕ್ಕಬಳ್ಳಾಪುರ : ಕನ್ನಡ ನಾಡು-ನುಡಿ ಕನ್ನಡಿಗರ ಆಸ್ತಿ. ಕನ್ನಡ ಭಾಷೆಯ ಸಂಪತ್ತು ಮತ್ತು ಶ್ರೀಮಂತಿಕೆಗೆ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು. ಸಿನಿಮಾರಂಗ ಮತ್ತು ರಾಜಕೀಯ ಎರಡು ನಮ್ಮ ಮನೆತನದಲ್ಲಿದೆ. ಕನ್ನಡ ನೆಲ-ಜಲ-ಭಾಷೆಯ ಉಳಿವಿಕೆಗೆ ಪ್ರಾದೇಶಿಕ ಪಕ್ಷಗಳ ಅನಿವಾರ್ಯವಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಅವರು ಪ್ರಜಾವಾಹಿನಿಯೊಂದಿಗೆ ಮಾತನಾಡಿ, ನಾಗಾರ್ಜುನ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಸಂತೋಷವಾಗಿ ಬಂದಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನನ್ನ ಅವಿನಾಭಾವ ಸಂಬAಧವಿದೆ. ರಾಜಕಾರಣ ಮಾಡುವ ಅವಕಾಶವಿದ್ದರೆ ಈ ಜಿಲ್ಲೆಯ ಜನತೆಯ ಸಹಕಾರದಿಂದ ಇಲ್ಲಿಂದಲೇ ಜನಸೇವೆ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪುನೀತ್ ರಾಜಕುಮಾರ್ ಅವರ ಸ್ಮರಣೆ ನೆಪದಲ್ಲಿ ನಾಯಕನಟರು ಮತ್ತು ಮಾಜಿ ಮುಖ್ಯಮಂತ್ರಿಯ ಪುತ್ರರಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಅತಿಥಿಯನ್ನಾಗಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದರು.

ಕಳೆದ ಎರಡು ವರ್ಷದಿಂದ ಕರೋನಾ ಕಾರಣದಿಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವು ಸೇರಿದಂತೆ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಿರಲಿಲ್ಲ. ಕರೋನಾ ನಿಯಮಗಳ ಸಡಿಲಿಕೆಯ ನಂತರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಿನಿಮಾನಟರು ಆಗಮಿಸುತ್ತಿದ್ದು ಕಾಲೇಜಿನ ಯುವ ವಿದ್ಯಾರ್ಥಿಗಳ ದಂಡು ಉತ್ಸಾಹದಿಂದ ಸೇರಿತ್ತು. ನಿಗದಿತ ಸಮಯಕ್ಕೆ ಮುಖ್ಯ ಅತಿಥಿ ಬರಲಿಲ್ಲ. ಆಡಳಿತ ಮಂಡಳಿಯ ಕರೆಯ ಮೇರೆಗೆ ಹೋಗಿದ್ದ ಪತ್ರಕರ್ತರು ಕಾದು ಕಾದು ಸುಸ್ತಾಗಿದ್ದರು.

ದಿನಪತ್ರಿಕೆಗಳ ವಿತರಕರಾದ ಜಗದೀಶ್ ಅವರ ಮೇಲೆ ಅಭಿಮಾನವಿಟ್ಟು ಹೋಗಿದ್ದರಿಂದ ಸುದ್ದಿ ಸಿಗುವವರೆಗೂ ಕಾಯುವ ಪರಿಸ್ಥಿತಿ ಪತ್ರಕರ್ತರದಾಗಿತ್ತು. ನಿಖಿಲ್ ಕುಮಾರಸ್ವಾಮಿ ಅವರನ್ನು ವಿದ್ಯಾರ್ಥಿಗಳು ಬರಮಾಡಿಕೊಂಡು ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ಮಾಡಿ ನಾಡಗೀತೆಗೆ ನಮನ ಸಲ್ಲಿಸಿದರು.

Related