ಉ.ಕ ಭಾಗದ ಜನರಿಗೆ ಸಿಹಿಸುದ್ದಿ

ಉ.ಕ ಭಾಗದ ಜನರಿಗೆ ಸಿಹಿಸುದ್ದಿ

ಹುಬ್ಬಳ್ಳಿ : ಹುಬ್ಬಳ್ಳಿ-ಮುಂಬೈ ನಡುವೆ ಏರ್ ಇಂಡಿಯಾ ವಿಮಾನ ಸಂಚಾರವನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಫೆ. 16ರಿಂದ ವಿಮಾನ ಸಂಚಾರ ಆರಂಭವಾಗಲಿದೆ.

ಏರ್ ಇಂಡಿಯಾ ಮುಂಬೈ-ಹುಬ್ಬಳ್ಳಿ ನಡುವೆ ಏರ್ ಬಸ್ ಸಂಚಾರವನ್ನು ಆರಂಭಿಸಲಿದೆ. ಇದರಿಂದಾಗಿ ಎರಡೂ ನಗರದ ಜನರಿಗೆ ಅನುಕೂಲವಾಗಲಿದೆ.
ಮಂಗಳವಾ, ಶುಕ್ರವಾರ ಮತ್ತು ಶನಿವಾರ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸಂಚಾರ ನಡೆಸಲಿದೆ. ಟಿಕೆಟ್ ಬುಕ್ಕಿಂಗ್‌ಗಾಗಿ ಏರ್ ಇಂಡಿಯಾ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹುಬ್ಬಳ್ಳಿ  ವಿಮಾನ  ನಿಲ್ದಾಣದಿಂದ ಹಲವಾರು ನಗರಗಳಿಗೆ ವಿಮಾನಗಳ ಸಂಪರ್ಕಿವಿದೆ. ಏರ್ ಇಂಡಿಯಾ, ಸ್ಟಾರ್ ಏರ್
ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿ ಮತ್ತು ವಿವಿಧ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.

ಉತ್ತರ ಕರ್ನಾಟಕ ಭಾಗಕ್ಕೆ ಹುಬ್ಬಳ್ಳಿ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಬಂದ್ ಆಗಿದ್ದ ವಿಮಾನ ನಿಲ್ದಾಣದಲ್ಲಿ ಈಗ ವಿಮಾನಗಳ ಹಾರಾಟ ಆರಂಭವಾಗಿದೆ.

ವಿಮಾನ ನಿಲ್ದಾಣದ ಹಳೆ ಟರ್ಮಿನಲ್ ಅನ್ನು ಸುಮಾರು 60.6 ಲಕ್ಷ ರೂ. ವೆಚ್ಚದಲ್ಲಿ ಸರಕು ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗಿದೆ. 700 ಚದರ ಮೀಟರ್ ಪ್ರದೇಶದ ಟರ್ಮಿನಲ್‌ನಲ್ಲಿ 15,00 ಮೆಟ್ರಿಕ್ ಟನ್ ಸರಕನ್ನು ಸಂಗ್ರಹ ಮಾಡಬಹುದಾಗಿದೆ.

Related