ಕೌಶಲ್ಯ ತರಬೇತಿ ಕೇಂದ್ರಗಳ ಒಕ್ಕೂಟದ ಪ್ರತಿನಿಧಿಗಳಿಗೆ ನಿರ್ಲಕ್ಷಿಸಿತ್ತಿರುವ ಸಚಿವರು

ಕೌಶಲ್ಯ ತರಬೇತಿ ಕೇಂದ್ರಗಳ ಒಕ್ಕೂಟದ ಪ್ರತಿನಿಧಿಗಳಿಗೆ ನಿರ್ಲಕ್ಷಿಸಿತ್ತಿರುವ ಸಚಿವರು

ಬೆಂಗಳೂರು: ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಂದ ನೀಡಲಾಗುತ್ತಿದ್ದ ಕೌಶಲ್ಯ ತರಬೇತಿಗಳನ್ನು ಕಡಿತಗೊಳಿಸಿದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕೌಶಲ್ಯ ಅಭಿವೃದ್ಧಿ ಸಚಿವರು ವಿಧಾನಸೌಧಕ್ಕೆ ಕರೆಸಿದ ಸಚಿವರು ಅವಮರ್ಯಾದೆ ಮಾಡಿ ಕಳುಹಿಸಿದ್ದಾರೆ ಎಂದು ನೊಂದ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸುಮಾರು ನೂರಕ್ಕೂ ಅಧಿಕ ತರಬೇತಿ ನೀಡುವ ಪ್ರತಿಭಟನಾಕಾರರು ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ನಿರತರಾಗಿದ್ದಾಗ ಪೊಲೀಸ್ ಅಧಿಕಾರಿಗಳು ತರಬೇತುದಾರರಲ್ಲಿ ನಾಲ್ವರು ಪ್ರಮುಖರನ್ನು ಸಚಿವರು ಭೇಟಿ ಮಾಡುವುದಾಗಿ ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋದರು, ಎಂದು ಕೌಶಲ್ಯ ಕರ್ನಾಟಕ ತರಬೇತುದಾರರ ಒಕ್ಕೂಟದ ಗೌರವ ಅಧ್ಯಕ್ಷರಾದ ಹೇಮಾವತಿ ತಿಳಿಸಿದರು.

ಪ್ರತಿಭಟನಾನಿರತ ತರಬೇತುದಾರರನ್ನು ವಿಧಾನಸೌಧಕ್ಕೆ ಕರೆಸಿ ಅವಮರ್ಯಾದೆ ಮಾಡುವ ಉದ್ದೇಶವಾದರೆ ಏನು? ನಾವು ನಮ್ಮ ಹಕ್ಕುಗಳನ್ನು ಮಾತ್ರ ಕೇಳಲು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಿರತರಾಗಿದ್ದೆವು. ವಿಧಾನಸೌಧಕ್ಕೆ ಕರೆಸಿದ ಸಚಿವರು ಕನಿಷ್ಠ ಪಕ್ಷ ಸೌಜನ್ಯದಿಂದಾದರು ಮಾತನಾಡದೆ ನಿಮ್ಮನ್ನು ಕರೆಸಿಲ್ಲವೆಂದು ಹೇಳಿ ಪ್ರತಿಭಟನಕಾರರ ಕಿಚ್ಚನ್ನು ಹೆಚ್ಚಿಸಿದ್ದಾರೆ, ಎಂದುದು ಹೇಮಾವತಿ ಹೇಳಿದರು.

ಒಕ್ಕೂಟದ ಅಧ್ಯಕ್ಷರಾದ ಶರಣಬಸಪ್ಪ ಚಲವಾದಿಯವರು ಮಾತನಾಡಿ, ರಾಜ್ಯ ಸರ್ಕಾರ ಬಜೆಟ್ ಮಂಡಿಸಿ ಸುಮಾರು ನಾಲ್ಕು ತಿಂಗಳು ಕಳೆದರೂ ಕೌಶಲ್ಯ ಸಚಿವರು ಇನ್ನು ಚರ್ಚಿಸುವ ಹಂತದಲ್ಲಿದ್ದಾರೆ, ಎಂದರೆ ಇವರಿಗೆ ಜನಪರ ಕಾಳಜಿ ಇಲ್ಲವೆ ಎಂದು ಪ್ರಶ್ನಿಸಿದರು.

ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿಐ ಹಾಗೂ ಪಾಲಿಟೆಕ್ನಿಕ್, ಬಿಟಿಟಿ ಸಿ, ಮತ್ತು ಇಂಡಸ್ಟ್ರಿಗಳಲ್ಲಿ ತರಬೇತಿ ಕೋರ್ಸ್ ಗಳನ್ನು ನಡೆಸಲು ಅನುದಾನವನ್ನು ಘೋಷಿಸಲು ಉದ್ದೇಶಿಸಿದ್ದರೆ ತರಬೇತಿ ಕೇಂದ್ರಗಳನ್ನು ಮತ್ತು ತರಬೇತಿದಾರರನ್ನು ಅವರಲ್ಲಿರುವ ಮೂಲಭೂತ ಸೌಕರ್ಯಗಳನ್ನು ವೃದ್ಧಿಸಲು ಏಕೆ ಹೇಳಿದರು. ಐಟಿಐ ಹಾಗೂ ಪಾಲಿಟೆಕ್ನಿಕ್ ಗೆ ತರಬೇತಿ ಜವಾಬ್ದಾರಿಯನ್ನು ನೀಡುವುದರಿಂದ ಆಗುವ ಅನುಕೂಲವಾದರೂ ಏನು ಎಂದು ಪ್ರಶ್ನಿಸಿದರು.

Related