ಒಂದು ಸಾವಿರ ಉಚಿತ ಮಾಸ್ಕ್ ವಿತರಿಸಿದ ಕಂಬಾಳು ಜನತೆ

ಒಂದು ಸಾವಿರ ಉಚಿತ ಮಾಸ್ಕ್ ವಿತರಿಸಿದ ಕಂಬಾಳು ಜನತೆ

ನೆಲಮಂಗಲ, ಮಾ. 29:  ಮಹಾಮಾರಿ ಕೊರೋನಾ ರೋಗ ನಿಯಂತ್ರಣಕ್ಕೆ ಮತ್ತು ಅರಿವನ್ನು ನೀಡಲು ಮುಂದಾದ ಯುವಕರು ತಂಡವೊಂದು, ಇಡೀ ಗ್ರಾಮದ ಜನರಿಗೆ ಮಾಸ್ಕ ಹಂಚಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ಎಲ್ಲಾ ನಾಗರಿಕರಿಗೆ ಉಚಿತ ಮಾಸ್ಕ್ ವಿತರಿಸಿ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ‌ ಮೂಡಿಸಿದ್ದಾರೆ. ಸಾಮಾಜಿಕ ಅಂತರ ಕೈಗೊಂಡು ಗ್ರಾಮದ ಜನರಿಗೆ ಮಾಸ್ಕ್ ವಿತರಣೆ ಮಾಡಿದ್ದು, ಕೊರೋನಾ ರೋಗದ ಬಗ್ಗೆ ಅರಿವನ್ನು ತಿಳಿಸಿದ್ದಾರೆ. ಇನ್ನೂ ಸುಮಾರು 1000 ಮಾಸ್ಕ್ ಹಂಚಿಕೆ ಮಾಡಿದ್ದು, ಮಾರಕಟ್ಟೆಯಲ್ಲಿ ದೊರೆತ ಮೇಲೆ ಇನ್ನೂ ಐದು ನೂರು‌ ಮಾಸ್ಕ್ ವಿತರಿಸುತ್ತೇವೆ, ಎಲ್ಲಾ ಗ್ರಾಮಗಳಲ್ಲಿ ಯುವಕರ ತಂಡಗಳು ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ, ಇದರ ಬದಲು ಮಾಸ್ಕ್ ನೀಡಲು ಮನಸ್ಸು ಮಾಡಿದ್ದೇವೆ, ಏಕೆಂದರೇ, ನಮ್ಮ ಕಂಬಾಳು ಗ್ರಾಮ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ, ಮುಖ್ಯ ರಸ್ತೆಯಾದ್ದರಿಂದ ತಡೆಗೋಡೆ ನಿರ್ಮಿಸಲು ಆಗಲಿಲ್ಲಾ, ಆದ್ದರಿಂದ ಯುವಕರು ಮಾಸ್ಕ್ ನೀಡಿ, ಕೊರೋನಾ ರೋಗದ ಬಗ್ಗೆ ಅರಿವು ಮೂಡಿಸುವ  ಕಾರ್ಯ ಸಾಥ್ ನೀಡಿದ್ದೇವೆ ಎನ್ನುತ್ತಾರೇ ಗ್ರಾಮಸ್ಥರು.

Related