ಕಲಾವಿದರು ಬೆಳೆಯಲು ಸಂಘ-ಸಂಸ್ಥೆಗಳ ಪ್ರೋತ್ಸಾಹ ಮುಖ್ಯ

ಕಲಾವಿದರು ಬೆಳೆಯಲು ಸಂಘ-ಸಂಸ್ಥೆಗಳ ಪ್ರೋತ್ಸಾಹ ಮುಖ್ಯ

ಶಹಾಪುರ : ಸಂಗೀತ ಕಲಾವಿದರಿಗೆ ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು, ಮಠ ಮಾನ್ಯಗಳು ಹೆಚ್ಚುಹೆಚ್ಚಾಗಿ ಅವಕಾಶ ನೀಡಿ ಪ್ರೋತ್ಸಾಹಿಸಿದಾಗ ಮಾತ್ರ ಕಲಾವಿದರು ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಸಂತೋಷ.ಎಮ್.ಆಚಾರ್ಯ ಹೇಳಿದರು.
ತಾಲ್ಲೂಕಿನ ಸಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ಯುವಕ ಸಂಸ್ಕೃತಿ ಕಲಾ ಸಂಘ, ಸಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಸುಗಮ ಸಂಗೀತ ಮತ್ತು ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರು ಕಲೆಯನ್ನು ನಂಬಿಕೊಂಡು, ಬದುಕು ಕಟ್ಟಿಕೊಂಡು ಸಾಗುತ್ತಿದ್ದಾರೆ. ಅವರಿಗೆ ಸರ್ಕಾರದ ಅನುದಾನದ ಜೊತೆಗೆ ಸಂಘ-ಸಂಸ್ಥೆಗಳು ಸಹಕಾರ ನೀಡಿ, ಸಹಾಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಲ್ಲಣ್ಣ, ಕೊಟ್ರೇಶ ಮರಬನಹಳ್ಳಿ, ಸಹಾಯಕ ನಿರ್ದೇಶಕರು, ಡಾ.ಡಿ.ಜಿ.ಹಡಪದ ಸಗರ, ಶೇಖರಪ್ಪ ಅರಕೇರಿ, ಬೂದೆಪ್ಪ ಉಳ್ಳಿ, ವಾಸುದೇವ ವಠಾರ, ವಿನೋದ ದೇವರಗುಡಿ, ಜಾನಪದ ಕಲಾವಿದರಾದ ಬಸವರಾಜ ಜಾಯಿ, ಮನೋಹರ ಸಿ ವಿಶ್ವಕರ್ಮ. ಸಗರ, ಮಾನಯ್ಯ ಆಚಾರಿ, ಸಗರ ರವರು ಗ್ರಾಮಸ್ಥರು ಇದ್ದರು.

Related