ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ

  • In State
  • March 11, 2020
  • 619 Views
ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ

ಕಲಬುರಗಿ, ಮಾ. 11: ಇತ್ತೀಚಿನ ಕೆಲವು ದಿನಗಳಲ್ಲಿ ವಿಶ್ವದಾದ್ಯಂತ ಕೊರೊನಾ ವೈರಸ್ ಎಂಬುವುದು ಜನರಲ್ಲಿ ಎಲ್ಲಿಲ್ಲದ ಭಯ ಭೀತಿಯನ್ನು ಹುಟ್ಟಿಸಿದೆ. ಕೊರೊನಾ ವೈರಸ್ ನಿಂದ ವಿಶ್ವದಲ್ಲಿ ಇಲ್ಲಿರುವ ಹಲವಾರು ಜನ ಸಾವನ್ನಪ್ಪಿದ್ದಾರೆ.

ಹೌದು, ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಕೊರೊನಾ ವೈರಸ್ ನಿಂದ ಒಬ್ಬರು ಬಲಿಯಾಗಿದ್ದಾರೆ. ದುಬೈನಿಂದ ಕಲಬುರಗಿಗೆ ವಾಪಸ್ ಆಗಿದ್ದ ಮಹಮದ್ ಹುಸ್ಸೆನ್ ಸಿದ್ದಿಕಿ (76) ಮೃತ ಶಂಕಿತ ಕೊರೊನಾ ವೈರಸ್ ಗೆ ಬಲಿಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಗೆ ಸಾಖಲಾಗಿದ್ದರು. ಮೊನ್ನೆ ಹೈದ್ರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ನಿನ್ನೆ ವಾಪಸ್ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಶಂಕೆ ಮೇಲೆ ಗಂಟಲು ದ್ರಾವ ಟೆಸ್ಟ್ ಗೆ ಬೆಂಗಳೂರಿಗೆ ಕಳಿಸಲಾಗಿತ್ತು. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಶಂಕಿಗೆ ಮೊದಲ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ. ತಾಲೂಕು ವೈದ್ಯಾಧಿಕಾರಿ ಶರಣಬಸಪ್ಪ ಹತನಾಳ ಮೃತ ವ್ಯಕ್ತಿಯ ಅಂತ್ಯಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

Related