ಬಿಜೆಪಿ ಶಾಸಕರ ವರ್ತನೆ ಅಕ್ಷಮ್ಯ, ಖಂಡನೀಯ!

ಬಿಜೆಪಿ ಶಾಸಕರ ವರ್ತನೆ ಅಕ್ಷಮ್ಯ, ಖಂಡನೀಯ!

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ 28 ರಾಷ್ಟ್ರೀಯ ವಿರೋಧ ಪಕ್ಷ ಆಗಮಿಸಿದ್ದನ್ನು ಖಂಡಿಸಿ ಇಂದು ಬಿಜೆಪಿ ಪಕ್ಷದವರು ವಿಧಾನಸೌಧದ ಸದನದಲ್ಲಿ ಸ್ಪೀಕರ್ ಮೇಲೆ ಎರಗಿರುವುದು ಖಂಡನಿಯವಾದ ಸಂದರ್ಭ.

ವಿರೋಧ ಪಕ್ಷದ ನಾಯಕರು ವಿಧಾನ ಸಭೆಯಲ್ಲಿ ವರ್ತಿಸಿಸ ರೀತಿ ಅಕ್ಷಮ್ಯವಾಗಿತ್ತು. ಅವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸಲಾಗಿದ್ದರಿಂದ ಅಧಿಕಾರಗಳನ್ನು ಬಳಸಿದ್ದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಹೇಳಿದ ಬಳಿಕ ಬಿಜೆಪಿ ಸದಸ್ಯರರು ಸದನದ ಬಾವಿಗೆ ಇಳಿದು ಧಿಕ್ಕಾರಗಳನ್ನು ಕೂಗಲಾರಂಭಿಸಿದರು. ಅವರು ಧರಣಿ ಮಾತ್ರ ನಡೆಸಿದ್ದರೆ ತಪ್ಪೆನಿಸುತ್ತಿರುಲಿಲ್ಲ.

ಆದರೆ ಬಜೆಟ್ ಪ್ರತಿಗಳನ್ನು ಹರಿದು ಆಗ ಸಭಾಧ್ಯಕ್ಷರ ಪೀಠದಲ್ಲಿ ಕುಳಿತ್ತಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದು ಅತಿರೇಕದ ಪರಮಾವಧಿಯಾಗಿತ್ತು. ಪೀಠ ಮತ್ತು ಸಭಾಧ್ಯಕ್ಷರ ಘನತೆ ಗೌರವಗಳಿಗೆ ಚ್ಯುತಿ ಬರುವ ರೀತಿಯಲ್ಲಿ ಬಿಜೆಪಿ ಸದಸ್ಯರು ವರ್ತಿಸಿದರು. ಆಡಳಿತ ಪಕ್ಷದ ಸದಸ್ಯರಾದ ಕೃಷ್ಣ ಬೈರೇಗೌಡ, ಎನ್ ಚಲುವರಾಯಸ್ವಾಮಿ, ಡಿಕೆ ಶಿವಕುಮಾರ್ ಮೊದಲಾದವರೆಲ್ಲ ಬಿಜೆಪಿ ಶಾಸಕರ ವರ್ತನೆ ಸರಿಯಲ್ಲ ಅವರನ್ನು ಸಸ್ಪೆಂಡ್ ಮಾಡಿ ಅಂತ ಕೂಗಿ ಹೇಳುತ್ತಿದ್ದರು.

Related