ಪ್ರಾಣಿಯಾದರೂ ಪ್ರಾಣ ಸ್ನೇಹಿತ

  • In Stories
  • February 12, 2020
  • 503 Views
ಪ್ರಾಣಿಯಾದರೂ ಪ್ರಾಣ ಸ್ನೇಹಿತ

ಧಾರವಾಡ, ಫೆ. 12: ಮನುಷ್ಯನಿಗಿಂತ ಪ್ರಾಣಿಯ ಸ್ನೇಹ ನಿಜಕ್ಕೂ ಅಪಾರ, ಒಂದು ವೇಳೆ ಮನುಷ್ಯ ಮನುಷ್ಯನಿಗೆ ಮಾಡಿದ ಉಪಕಾರವನ್ನು ಮರಿಯ ಬಹುದು, ಆದರೆ ನಾಯಿ ಮಾತ್ರಾ ಮರಿಯುವುದಿಲ್ಲ .

ಅದಕ್ಕೆ ಒಳ್ಳೆಯ ಉದಾಹರಣೆ ಅಂದ್ರೆ ನನ್ನ ಜೀವನದಲ್ಲಿ ಆದ ಘಟನೆಯೇ ಹೊರತು ಮತ್ಯಾವ ಉದಾಹರಣೆ ಕೂಡಾ ನಾನು ಕೊಡಲಾರೆ, ನಮ್ಮ ಮನೆ ಹತ್ತಿರ ಒಂದು ಬೀದಿ ನಾಯಿ ಮರಿ ಹಾಕಿತ್ತು ನಮ್ಮ ಮನೇಲಿ ಎಲ್ಲರು ಪ್ರಾಣಿ ಪ್ರೇಮಿಯಾಗಿದ್ದರಿಂದ ಅವುಗಳಿಗೆ ದಿನಾಲು ಊಟ ಹಾಕುತ್ತಿದ್ದರು. ಅಲ್ಲಿ ಇದ್ದ ನಾಲ್ಕು ಮರಿಗಳಲ್ಲಿ ಒಂದು ಮರಿ ನಮ್ಮನ್ನ ತುಂಬಾ ಹಚ್ಚಿಕೊಂಡಿತ್ತು ಆ ಮರಿಗೆ ನಾವು ಇಟ್ಟ ಹೆಸರು ಬ್ಲ್ಯಾಕಿ, ಯಾಕೆ ಅಂದರೆ  ಅದು ಕಪ್ಪು ಬಣ್ಣದಾಗಿತ್ತು, ಸ್ವಲ್ಪ ದಿನಗಳ ನಂತರ ನಾವು ಇದ್ದ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋಗಿದ್ದೆವು ಆವಾಗಿನಿಂದ ಆ ನಾಯಿಗೆ ನಾವು ಭೇಟಿ ಆಗಿರಲಿಲ್ಲ ಆದ್ರೆ ಒಂದು ದಿನ ನಮ್ಮ ಮನೆಯವರನ್ನು ಹಿಂಬಾಲಿಸಿಕೊಂಡು ನಾವು ಇದ್ದ ಮನೆಗೆ ಬಂದಿಯೇ ಬಿಟ್ಟಿತ್ತು.

ಆ ಕ್ಷಣದಲ್ಲಿ ಅದರ ಖುಷಿಗೆ ಪಾರವೇ ಇರಲಿಲ್ಲ ಆದ್ರೆ ಅದು ಕೂಡಾ ಒಂದು ದಿನ ಕಾರು ಅಪಘಾತದಲ್ಲಿ ಸಾವನ್ನಪ್ಪಿತ್ತು ಅದರ ನೆನಪು ಇನ್ನೂ ಕೂಡಾ ಕಾಡುತ್ತೆ,  ಅದೇ ರೀತಿ  ಹಾಲಿವುಡ್ ನ ಈ ಹ್ಯಾಚಿಕೊ ಚಿತ್ರ ಕೂಡಾ ಸ್ನೇಹಿತರೆ, ಹೌದು ಈ ನಾಯಿ ಕೂಡಾ ತನ್ನ ಒಡೆಯನಿಗೋಸ್ಕರ ಬರೋಬ್ಬರಿ 9 ವರ್ಷಗಳ ಕಾಲ ಕಾದು ಅದೇ ಜಾಗದಲ್ಲಿ ತನ್ನ ಕೊನೆ ಉಸಿರೆಳೆದಿದೆ,  ಹ್ಯಾಚೊ ತನ್ನನು ಸಾಕಿ ಸಲುಹಿದ ತನ್ನ ಒಡೆಯನ ಬರುವಿಕೆಗಾಗಿ ಕಾಯ್ದು ಇಹಲೋಕ ತ್ಯಜಿಸಿದ.

ನೈಜ್ಯ ಘಟನೆ ಆಧಾರಿತ ಚಿತ್ರವೇ ‘ಹ್ಯಾಚಿಕೊ’ ಏನೋ ಚಿತ್ರದ ಕಥೆ ಹೇಳ್ತಿದೀನಿ ಅನ್ಕೋಬೇಡಿ ನನ್ನ ಜೀವನದಲ್ಲಿ ನಡೆದ ಹಾಗೇನೇ ಈ ಚಿತ್ರದಲ್ಲೂ ಬರುವ ಶ್ವಾನ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದೆ. ಜಪಾನ್ ನ ಒಡೆಟ್ ನಲ್ಲಿ 1923ರಲ್ಲಿ ಜನಿಸಿದ್ದ ಹ್ಯಾಚೊ ಒಡೆಯ ಡಾ. ಏಸುಬುರೋ ಉಯೇನೋ ಎನ್ನುವವರ ಬಳಿ ಪೋಷಿಸಲ್ಪಟ್ಟಿತ್ತು, ಇವರು ಟೋಕಿಯೋದ ಒಂದು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಹ್ಯಾಚೊವನ್ನು ಚಿಕ್ಕಂದಿನಿಂದ ಬಹಳಷ್ಟು ಪ್ರೀತಿಯಿಂದ ಸಾಕಿಸಲುಹಿದ್ದರು ಯಾವ ಮಟ್ಟಿಗೆ ಹ್ಯಾಚೊನನ್ನು ಹಚ್ಚಿಕೊಂಡಿದ್ದರೆಂದ್ರೆ ಅವರನ್ನು ಹ್ಯಾಚೊ ದಿನಾಲೂ ರೈಲಿಗೆ ಹತ್ತಿಸಲು ರೈಲ್ವೆ ನಿಲ್ದಾಣದವರೆಗೂ ಹೋಗುತ್ತಿದ್ದ.

ಈ ದಿನಚರಿಯ ಅವರಿಬ್ಬರ ಒಡನಾಟ ಅಲ್ಲಿನ ಜನರ ಮನಸ್ಸನ್ನು ಕೂಡಾ ಗೆದ್ದಿತ್ತು, ಇದು ಪ್ರತಿದಿನವೂ ಹಾಗೆಯೇ ಸಾಗುತ್ತಿತ್ತು ಆದರೆ ಮೇ 1925 ರಲ್ಲಿ ಪ್ರೊಫೆಸರ್ ವಿಶ್ವ ವಿದ್ಯಾಲಯಕ್ಕೆ ಹೋಗತ್ತಾನೆ ಆದ್ರೆ ವಿಧಿಯಾಟ ಏನಂದ್ರೆ ಪ್ರೊಫೆಸರ್ ಅಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ, ಇದನ್ನು ಅರಿಯದ ಹ್ಯಾಚೊ ಪ್ರತಿನಿತ್ಯ ಅವರ ಹಾದಿಯನ್ನೇ ಎದುರು ನೋಡುತ್ತಾ ಚಳಿ,ಗಾಳಿ ಅನ್ನದೆ ಹ್ಯಾಚೊ ಸರಿಸುಮಾರು 9 ವರ್ಷಗಳ ಕಾಲ ಸಿಬುಯಾ ರೈಲ್ವೆ ನಿಲ್ದಾಣದ ಮುಂದೆಯೇ ಕಾಯ್ದು ಅಲ್ಲಿಯೇ ಜೀವ ತ್ಯಾಗ ಮಾಡಿದ್ದು ಮನಕಲುಕುವ ಸನ್ನಿವೇಶ.

ಈ ಘಟನೆಯ ಸ್ಮರಣಾತ್ಮಕವಾಗಿ ಚಿನಾದಲ್ಲಿ ಹ್ಯಾಚೊ ಮತ್ತು ಅದರ ಒಡೆಯ ಡಾ. ಏಸುಬುರೋ ರ ಪುತ್ಥಳಿಯನ್ನು ಕೆತ್ತಿಸಿ ಅದೇ ರೈಲ್ವೆ ನಿಲ್ದಾಣದ ಬಳಿ ಹ್ಯಾಚೊ ತನ್ನ ಒಡೆಯನಿಗಾಗಿ ಕಾಯುತ್ತಿದ್ದ ಅದೇ ಸ್ಥಳದಲ್ಲಿ ಪ್ರತಿಷ್ಠಿಸಲಾಗಿದೆ. ಇಂತಹ ಒಂದು ಭಾಂದವ್ಯ ನಿಯತ್ತು ಶ್ವಾನಕ್ಕಿದೆ ಎಂಬುದು ಎಲ್ಲರು ತಿಳಿದ ವಿಷಯ. ಆದರೆ ಇಂತಹ ಘಟನೆ ನಡೆದಿದ್ದು, ಪ್ರತಿಯೊಬ್ಬರ ಕಣ್ಣಂಚಲಿ ನೀರನ್ನು ತರಿಸುತ್ತದೆ. ನನ್ನ ಜೀವನದಲ್ಲೂ ಕೂಡಾ ನಾಯಿಯೊಂದಿಗಿನ ನನ್ನ ಒಡನಾಟ ಮರೆಯಲು ಸಾಧ್ಯವಿಲ್ಲ, ಅದಕ್ಕೆ ಅದು ಸಾಕಿರೋ ನಾಯಿ ಆಗಿರ್ಬೋದು ಬೀದಿ ನಾಯಿಯಾಗಿರ್ಬೋದು ಅವುಗಳ ಪ್ರೀತಿ, ವಿಶ್ವಾಸವನ್ನು ತೂಕ ಮಾಡಲು ಸಾಧ್ಯವಿಲ್ಲ.

ನಾನು ಹೇಳೋದು ಒಂದೇ ಊಟವಿಲ್ಲದೆ ಹಸಿವಿನಿಂದ ಒದ್ದಾಡುವ ಶ್ವಾನಗಳಿಗೆ ನಿಮ್ಮ ಕೈಲಾದಷ್ಟು ಊಟ ಹಾಕಿನೋಡಿ ಅವು ಬದುಕಿರೋ ವರೆಗೂ ನಿವು ಹಾಕಿದ ಒಂದು ತುತ್ತು ಅನ್ನಕ್ಕೆ ಋಣಿಯಾಗಿರುತ್ತವೆ. ಅದಕ್ಕೆ ಹೇಳೋದಲ್ವಾ ನಿಯತ್ತಿಗೆ ಶ್ವಾನವನ್ನು ಮೀರಿಸುವ ಪ್ರಾಣಿ ಇನ್ನೊಂದಿಲ್ಲ ಅಂತ.

Related