ಶೂಟಿಂಗ್ ವೇಳೆ ತೀವ್ರ ಗಾಯಗೊಂಡ ನಟಿ ಆಸ್ಪತ್ರೆಪಾಲು..!

ಶೂಟಿಂಗ್ ವೇಳೆ ತೀವ್ರ ಗಾಯಗೊಂಡ ನಟಿ ಆಸ್ಪತ್ರೆಪಾಲು..!

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗಡೆ ಅವರು ಚಿತ್ರೀಕರಣ ವೇಳೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೀಮ್ ಚಿತ್ರದ ಚಿತ್ರೀಕರಣ ವೇಳೆ ಈ ಅವಘಡ ಸಂಭವಿಸಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸ್ವತಃ ಸ್ಟಂಟ್ ಮಾಡಲು ಹೋಗಿದ್ದಾಗ ನಟಿ ಗಾಯಗೊಂಡಿದ್ದಾರೆ.

ನಟಿಯ ಕಾಲು ಮತ್ತು ಕಣ್ಣಿನ ಬಳಿ ಗಾಯಗಳಾಗಿದ್ದು ವೈದ್ಯರೂ 15 ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಕ್ರೀಮ್ ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇದು ನೈಜ್ಯ ಘಟನೆ ಆಧಾರಿತ ಚಿತ್ರವಾಗಿದ್ದು ಶೇಕಡ 90ರಷ್ಟು ಚಿತ್ರೀಕರಣ ಮುಗಿದಿತ್ತು. ನಾವು ಡ್ಯೂಪ್ ಬಳಸಲು ಹೇಳಿದ್ದೇವು.  ಅದಕ್ಕೆ ಸಂಯುಕ್ತಾ ಒಪ್ಪಲಿಲ್ಲ ಎಂದು ನಿರ್ಮಾಪಕ ಡಿಕೆ ದೇವೇಂದ್ರ ಹೇಳಿದ್ದಾರೆ.

ಚಿತ್ರಕ್ಕೆ ಪ್ರಭು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿದ್ದಾರೆ.

Related