ಬಾಗಿಲಿಗೆ ಬಂದ ಸರ್ಕಾರದ ಅನುಕೂಲ ಪಡೆಯಿರಿ: ಡಿಕೆಶಿ

ಬಾಗಿಲಿಗೆ ಬಂದ ಸರ್ಕಾರದ ಅನುಕೂಲ ಪಡೆಯಿರಿ: ಡಿಕೆಶಿ

ಕೆಆರ್ ಪುರಂ: ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಅವನ್ನು ಅನುಷ್ಠಾನಕ್ಕೆ ತಂದಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ತರ ಹೆಜ್ಜೆಯಿರಿಸಿ ಸಾರ್ವಜನಿಕರ ಅಹವಾಲುಗಳನ್ನು ಸಕಾಲದಲ್ಲಿ ನಿವಾರಿಸುವ ಗುರಿಯನ್ನು ಹೊಂದಿದೆ.

ಈ ಉದ್ದೇಶದಿಂದಲೇ ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ ಎಂಬ ಧ್ಯೇಯದೊಂದಿಗೆ ಇಂದು ಕೆ ಆರ್ ಪುರಂ ಕ್ಷೇತ್ರದ ಐಟಿಐ ಮೈದಾನದಲ್ಲಿ ಬೃಹತ್ ಜನ ಸಂಪರ್ಕ ವೇದಿಕೆಯನ್ನು ಆಯೋಜಿಸಿ ಸಾರ್ವಜನಿಕ ಅಹವಾಲು ನಿವಾರಣ ವೇದಿಕೆಯನ್ನು ಸೃಷ್ಟಿ ಮಾಡಿದೆ ಈ ಯೋಜನೆಯ ಮೊದಲನೇ ಹಂತವಾಗಿ ಕೆ ಆರ್ ಪುರಂ, ಮಹದೇವಪುರದ ಕ್ಷೇತ್ರಗಳಲ್ಲಿ ಇರುವಂತಹ ಕುಂದು ಕೊರತೆ ಅಲಿಸಲು ಮತ್ತು ನಿವಾರಿಸಲು ಸರ್ಕಾರ ಬಂದಿದೆ.

ಬಿಬಿಎಂಪಿ, ಬಿಡಿಎ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಎಂಆರ್‌ಡಿಎ, ಬೆಸ್ಕಾಂ, ಮೆಟ್ರೋ, ಕೊಳಗೇರಿ ಅಭಿವೃದ್ಧಿ ಮಂಡಳಿ, ಸಾರಿಗೆ ಮತ್ತು ಕಂದಾಯ ಸೇರಿದಂತೆ ಹಲವಾರು ಇಲಾಖೆಗಳ ಕುಂದುಕೊರತೆಗಳನ್ನು ಇಂದು ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇತ್ಯರ್ಥ ಗೊಳಿಸಿಕೊಳ್ಳುವ ಅವಕಾಶ ಒದಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್ ಮತ್ತು ಮಹಾದೇವಪುರದ ಶಾಸಕರಾದ ಮಂಜುಳಾ ಲಿಂಬಾವಳಿ ಅವರು ತಮ್ಮ ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ವಿವರಿಸಿದರು.

ಮೊದಲಿಗೆ ಕುಡಿಯುವ ನೀರಿನ ಹಾಹಾಕಾರ ಇರುವುದರಿಂದ ಕಾವೇರಿ ಐದನೇ ಹಂತವನ್ನು ಬಹುಬೇಗ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕೆಂದು ಶಾಸಕದ್ವಯರು ಕೋರಿಕೊಂಡರು. ಕೆರೆಗಳು, ರಸ್ತೆಗಳು, ಕುಡಿಯುವ ನೀರು, ಬೃಹತ್ ನೀರುಗಾಲುವೆ, ಕಾವೇರಿ 5ನೇ ಹಂತ ಕ್ಕೆ ಸಂಬಂಧಿಸಿದಂತೆ ಮತ್ತು ಸಂಸ್ಕಾರಣಾ ಘಟಕ, ಕೊಳವೆ ಬಾವಿಗಳನ್ನು ಹೊರಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲು ಕೋರಿದರು.

ಬೈರತಿ ಬಸವರಾಜ್ ಮತ್ತು ಮಂಜುಳಾ ಲಿಂಬಾವಳಿ ಅವರು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಂದಿದ್ದಂತಹ ಅನುದಾನವನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ. ಇದರಿಂದ ಅನೇಕ ಕಾಮಗಾರಿಗಳ ಪ್ರಗತಿ ಕುಂಠಿತವಾಗಿದ್ದು ಸಾರ್ವಜನಿಕರು ತೊಂದರೆಯನ್ನು ಅನುಭವಿಸುವಂತಾಗಿದೆ. ಆದ್ದರಿಂದ ತಡೆ ಹಿಡಿದಿರುವ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ಸಹಕಾರ ನೀಡಬೇಕಾಗಿ ಕೋರಿದರು.

ಇದೇ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸರಕಾರದ ಎಲ್ಲಾ ಅಧಿಕಾರಿಗಳು ನಿಮ್ಮ ಬಾಗಿಲಿಗೆ ಬಂದಿದ್ದೇವೆ. ಸಂಜೆವರೆಗೂ ಇಲ್ಲಿಯೇ ಇದ್ದು ನಿಮ್ಮ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಇಲ್ಲಿರುವ ಕೌಂಟರ್ಗಳಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಹವಾಲುಗಳನ್ನು ಸಲ್ಲಿಸಲು ಕೋರುತ್ತೇನೆ. ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರವನ್ನು ಒದಗಿಸುವ ಭರವಸೆ ನೀಡುತ್ತೇನೆ.

ನನಗೆ ರಾಜಕೀಯ ಮುಖ್ಯವಲ್ಲ. ನಿಮ್ಮ ಬದುಕು ನಿಮ್ಮ ಬದುಕಿನ ಸುಧಾರಣೆ ನನಗೆ ಮುಖ್ಯ. ಆದ್ದರಿಂದ ನಿಮ್ಮ ಬಳಿಯೇ ನಾವು ಬಂದಿದ್ದೇವೆ. ಶಾಸಕ ದೊರೆಯರು ಹೇಳಿರುವಂತಹ ನೀರು ರಸ್ತೆ ಮತ್ತು ಫ್ಲೈಓವರ್ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರಯತ್ನ ಪಡುತ್ತೇನೆ ಎಂದು ಭರವಸೆ ನೀಡಿದರು.

ಕಸದ ಸಮಸ್ಯೆ ಪರಿಹರಿಸಲು ಹೊಸ ಪರಿಹಾರವನ್ನು ಕಂಡುಕೊಂಡಿದ್ದೇವೆ. ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಸಾವಿರಾರು ಟನ್ ಕಸಗಳನ್ನು ಸಂಸ್ಕರಿಸಲು ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಘಟಕಗಳಿಂದ ಕಸವನ್ನು ಸಂಸ್ಕರಿಸಿ ವಿದ್ಯುತ್ ತಯಾರಿಸುವುದು ಅಥವಾ ಪ್ರಕೃತಿಗೆ ಅಪಾಯವಾಗದಂತೆ  ಸುಡುವ ಕೆಲಸ ಮಾಡಲಾಗುವುದು. ಶೀಘ್ರದಲ್ಲಿ ಇದಕ್ಕೆ ಟೆಂಡರ್ ಗಳನ್ನು ಕರೆಯಲಾಗುವುದು ಎಂದು ಭರವಸೆ ನೀಡಿದರು.

 

Related