ರಾಜ್ಯದ ರೈತರಿಗೆ ‘ಸಿಹಿ ಸುದ್ದಿ’

ರಾಜ್ಯದ ರೈತರಿಗೆ ‘ಸಿಹಿ ಸುದ್ದಿ’

ಹಾಸನ : ರಂಜಕಯುಕ್ತ ರಸಗೊಬ್ಬರಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯು ತಮ್ಮ ಪ್ರಖ್ಯಾತ ರಸಗೊಬ್ಬರಗಳಾದ ಗ್ರೋಮೋರ್ ಪ್ಯಾರಂಫಾಸ್ ಮತ್ತು ಗ್ರೋಮೋರ್ 20-20-0-13 ರಸಗೊಬ್ಬರಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಪ್ರತಿ ಚೀಲದ ಮೇಲೆ 50 ರೂ. ಕಡಿತಗೊಳಿಸಿದೆ ಪ್ರತಿ ಟನ್ ಮೇಲೆ 1000 ರೂ. ಕಡಿತ.

ಕೋರಮಂಡಲ್ ಕಂಪನಿಯು ರೈತರ ಸೇವೆಯಲ್ಲಿ ಸದಾ ಮುಂದೆ ಇದ್ದು, ಇಂದಿನ ಕೊರೋನ ಕಷ್ಟಕರ ಪರಿಸ್ಥಿತಿಯನ್ನು ಅರಿತು ದೀಪಾವಳಿ ಹಬ್ಬದ ಮುಂಚಿತವಾಗಿ ಮೇಲೆ ತಿಳಿಸಿದ ರಸಗೊಬ್ಬರಗಳ ಮೇಲೆ ಪ್ರತಿ ಚೀಲಕ್ಕೆ 50 ರೂ. ಕಡಿತಗೊಳಿಸಿದ ಸುದ್ದಿಯನ್ನು ಬಿಡುಗಡೆ ಮಾಡಿದೆ.

ಇಂದು ಅರಕಲಗೂಡು ತಾಲ್ಲೂಕಿನ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ನಡೆದ ರೈತರ ಸಮಾರಂಭದಲ್ಲಿ ಬೆಲೆ ಕಡಿತಗೊಂಡ ರಸಗೊಬ್ಬರಗಳ ವಿವರಗಳನ್ನು ಜಿಲ್ಲೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ ಕುಮಾರ್ ಮತ್ತು ರೇಷ್ಮೇ ಇಲಾಖೆಯ ಸಹಾಯಕ ನಿರ್ದೇಶಕರಾದ ಸೀತಾರಾಮನ್ ಅವರು ರೈತರಿಗೆ ಮಾಹಿತಿ ನೀಡಿದರು.

Related