ಮಾತು ಕೋಟ್ಟಂತೆ ನಡೆದುಕೋಳ್ಳಲ್ಲಿ ಸ್ವಾಮಿಗಳ ಒತ್ತಾಯ

ಮಾತು ಕೋಟ್ಟಂತೆ ನಡೆದುಕೋಳ್ಳಲ್ಲಿ ಸ್ವಾಮಿಗಳ ಒತ್ತಾಯ

ಅಥಣಿ-ಉತ್ತರ ಕ. ಪ್ರವಾಹದಿಂದ ನೆರೆ ಸಂತ್ರಸ್ಥರ ಪರಿಸ್ಥಿತಿ ದುಸ್ಥಿತಿಯಾಗಿದೆ, ಉತ್ತರ ಕ. ಭಾಗದವರೇ ಸಿಎಂ ಆಗಿದ್ರಿಂದ ಈ ಭಾಗದ ಜನರ ಸಮಸ್ಯೆ ತಕ್ಷಣವೇ ಆಲಿಸುವಂತೆ ಸಿಎಂ ಅವರಿಗೆ ಆಗ್ರಹಿಸಲಾಗಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು ಹೇಳಿದರು.
ಅವರು ಅಥಣಿ ತಾಲೂಕಿನ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಗ್ರಾಮಗಳಿಗೆ ಬಂದಾಗ ಅಥಣಿ ಪಟ್ಟಣದ ಮುಖಂಡ ಧರೆಪ್ಪ ಠಕ್ಕಣ್ಣವರ ಅವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ನವರು ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಲಾಗುವುದು ಎಂದು ಮಾತು ನೀಡಿದ್ದರು, ಸದ್ಯ ರಾಜಕೀಯ ಪರಸ್ಥಿತಿ ಅನುಗುಣವಾಗಿ ಸಿಎಂ ಬದಲಾವಣೆ ಆಗಿದೆ, ರ‍್ಕಾರ ಮಾತು ಕೊಟ್ಟಂತೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಪ್ರಸ್ತುತ ಸಿಎಂ ನೀಡಬೇಕು,
ನಮ್ಮ ಸಮಾಜಕ್ಕೆ ಸೆಪ್ಟೆಂಬರ್ ೩೦ರ ಒಳಗಾಗಿ ಮೀಸಲಾತಿ ನೀಡಬೇಕು ಇಲ್ಲವಾದರೆ ಅಕ್ಟೋಬರ್ ೧ ರಂದು ಜೆಎಚ್ ಪಟೇಲ್ ಜಯಂತಿಯಂದು ಬೆಂಗಳೂರು ಫ್ರೀಡಂಪರ‍್ಕ್ ನಲ್ಲಿ ಹೊರಾಟ ಮುಂದುವರೆಯುವುದು.
ರ‍್ಕಾರ ಮಾತು ನೀಡಿರುವ ಅವಧಿ ಮುಗಿಯುವುದರಿಂದ ರ‍್ಕಾರ ಕೂಡಲೇ ಎಚ್ಚೆತ್ತುಕೊಂಡು ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿ ಅವರಿಗೆ ಮೀಸಲಾತಿ ನೀಡಲಿ ಮಾತು ತಪ್ಪಿದರೆ, ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಮ್ಮ ಬೆಡಿಕೆಯ ಹೋರಾಟದ ಸಂರ‍್ಭದಲ್ಲಿ ಇಂದಿನ ಸಿಎಮ್ ಬೊಮ್ಮಾಯಿಯವರು ಗೃಹ ಮಂತ್ರಿ ಆಗಿದ್ದವರು ಸಂರ್ಪೂಣ ಮಾಹಿತಿ ತಿಳಿದವರು ನಮ್ಮ ಬೇಡಿಕೆಗೆ ಸ್ಪಂದಿಸುವುದು ಈಗ ಸಕಾಲ ವಾಗಿದೆ ಎಂದ ಅವರು ಉತ್ತರ ರ‍್ನಾಟಕದ ಜನ ೨೦೧೯ ರಿಂದ ಇಲ್ಲಿಯವರೆಗೆ ಪ್ರವಾಹದಿಂದ ನಿರಂತರವಾಗಿ ಅತಂತ್ರವಾಗಿದ್ದಾರೆ ಇದಕ್ಕೆ ಪ್ರಮುಖ ಕಾರಣ ರ‍್ಕಾರದ ಇಚ್ಚಾಶಕ್ತಿ ಕೊರತೆ ಎಂದು ಕಾಣುತ್ತದೆ ಎಂದು ರ‍್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಜ್ಞಾ ಪಂಚಾಯತ್ ಮಟ್ಟದಿಂದ ಪಂಚಮಸಾಲಿ ಎಂಬ ಧೈಯ ವಾಕ್ಯದೊಂದಿಗೆ ಅಭಿಯಾನವನ್ನು , ಪಂಚಮಸಾಲಿ ಗೌಡ ಹಾಗೂ ದೀಕ್ಷಾ ಪಂಚಮಸಾಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಜಾಗೃತಿ ಕೈಗೊಳ್ಳಲು ನರ‍್ಧರಿಸಲಾಗಿದೆ. ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿ ಕೊಡುತ್ತಾರೆಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ ಕಾಣದ ಕೈಗಳ ಒತ್ತಡದಿಂದ ಕೈತಪ್ಪಿ ಸಮಾಜಕ್ಕೆ ಅಗೌರವ ಆಗಿದೆಯೆಂದು ಸಮಾಜ ಭಾಂದವರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ ಜನಸಂಖ್ಯೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶವನ್ನು ಬಿಜೆಪಿ ವರಿಷ್ಠರು ಕಲ್ಪಿಸಿ ಕೊಡುತ್ತಾರೆಂದು ನಾವು ನಂಬಿದ್ದೇವೆ. ಒಂದು ವೇಳೆ ಕಡೆಗಣಿಸಿದರೆ ಮೀಸಲಾತಿ ಹಾಗೂ ಮುಖ್ಯಮಂತ್ರಿ ಸ್ಥಾನ ಎರಡನ್ನು ಕಲ್ಪಿಸದೆ ಸಮಾಜಕ್ಕೆ ಬಿಜೆಪಿ ವರಿಷ್ಠರು ಅಗೌರವ ಮಾಡಿದ್ದಾರೆಂದು ಭಾವಿಸಿ ಮುಂದಿನ ದಿನಗಳಲ್ಲಿ ಸಮಾಜದವರು ತಮ್ಮ ಅಸಮಾಧಾನವನ್ನು ಚುನಾವಣೆ ಸಂರ‍್ಭದಲ್ಲಿ ತೋರಿಸುವ ಸಾಧ್ಯತೆ ಇದೆ ಎಂದು ಹೇಳಬಹುದು ಎಂದು ತಿಳಿಸಿದರು.
ಈ ವೇಳೆ ಮುಖಂಡ ಧರೆಪ್ಪ ಠಕ್ಕಣ್ಣವರ, ಲಕ್ಕಣ್ಣ ಮುಡಸಿ, ನಿಶಾಂತ ದಳವಾಯಿ, ಸದಾಶಿವ ಕೆಂಗಲಗುತ್ತಿ, ಮುತ್ತಣ್ಣ ಸಂತಿ, ಸಂತೋಷ ಘಾಳಿ, ಬಸವರಾಜ ಸವದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related