ಆತ್ಮಹತ್ಯೆ ಸರಿನಾ ?

ಆತ್ಮಹತ್ಯೆ ಸರಿನಾ ?

ಹುಬ್ಬಳ್ಳಿ, ಮಾ. 30 : ಮದ್ಯ ಸಿಗುತ್ತಿಲ್ಲಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸೂರಿನ ಗಣೇಶ ಪಾರ್ಕ್ ನಲ್ಲಿ ನಡೆದಿದೆ. ಧಾರವಾಡ ಮೂಲದ ಉಮೇಶ ಹಡಪದ (46) ಮೃತ ವ್ಯಕ್ತಿ. ಮದ್ಯದಂಗಡಿ ಬಂದ್ ಆಗಿದ್ದು, 5 ದಿನದಿಂದ ಮದ್ಯ ಸಿಕ್ಕಿರಲಿಲ್ಲ. ಮದ್ಯ ಸಿಗದೇ ಕಂಗಾಲಾಗಿ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ರೈತ ಆತ್ಮಹತ್ಯೆ
ಸಾಲ ತೀರಿಸಲಾಗದೆ ರೈತ ನೇಣಿಗೆ ಶರಣಾಗಿರುವ ಘಟನೆ ಕುಂದಗೋಳ ತಾಲೂಕಿನ ಕಮಡೊಳ್ಳಿಯಲ್ಲಿ ನಡೆದಿದೆ.ಮಂಜುನಾಥ ಹನುಮಂತಪ್ಪ ಭಜಂತ್ರಿ (40) ಮೃತ ದುರ್ದೈವಿ. ಸಾಲ ತೀರಿಸಲಾಗದೇ ಮನನೊಂದು ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಕೃಷಿಕ ಮಂಜುನಾಥ ಹನುಮಂತಪ್ಪ ಭಜಂತ್ರಿ (40) ಎಂಬುವವರು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರು 11 ಎಕರೆ 11 ಗುಂಟೆ ಜಮೀನಿನಲ್ಲಿ ವ್ಯವಸಾಯಕ್ಕಾಗಿ ಕುಬಿಹಾಳದ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಎಂಟು ಲಕ್ಷ ರೂ ಸಾಲ ಪಡೆದಿದ್ದು, ಈ ವರ್ಷ ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಗಳು ಅತಿವೃಷ್ಟಿಯಿಂದ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ರೇಖಾ ಭಜಂತ್ರಿ ಕುಂದಗೋಳ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related