ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ

ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ

ಬೆಂಗಳೂರು: ಇಂದು ಮೇ 10 ಮತದಾನದ ದಿನವಾಗಿದ್ದು ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಇಂದು ಬೆಂಗಳೂರಿನಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೆಂಗಳೂರಿನ ಜಯನಗರದ ಬೂತ್‌ನಲ್ಲಿ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ದಂಪತಿ ಮತದಾನ ಮಾಡಿದರು. ಈ ವೇಳೆ ಸುಧಾಮೂರ್ತಿ ಅವರು ಮತದಾನಕ್ಕೆ ಬಂದಿದ್ದ ಜನರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಸುಧಾಮೂರ್ತಿ ಅವರ ಜೊತೆಗೆ ಜನರು ಸೆಲ್ಫಿಗೆ ಮುಗಿಬಿದ್ದ ದೃಶ್ಯವೂ ಕಂಡುಬಂತು.

 

 

Related