ಜಿಲ್ಲಾ ಆಡಳಿತದ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ

ಜಿಲ್ಲಾ ಆಡಳಿತದ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ

ಗದಗ: ರಾಜ್ಯ ಕೇಂದ್ರ ಸರ್ಕಾರಗಳು ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಕೋಟ್ಯಂತರ ರೂ. ಅನುದಾನವನ್ನು ಬಿಡುಗಡೆ ಮಾಡಿರುತ್ತದೆ. ಆದ್ರೆ ಕೋಟ್ಯಂತರ ಅನುದಾನವನ್ನು ನುಂಗಿ ನೀರು ಕುಡಿದಿದ್ದ ಅಧಿಕಾರಿಗಳ ವಿರುದ್ಧ ಬೀದಿಬದಿ ವ್ಯಾಪಾರಿಗಳು ಕೆಂಡಮಂಡಲವಾಗಿದ್ದಾರೆ.

ಹೌದು, ಗದಗ ಜಿಲ್ಲೆಯಲ್ಲಿ ಬೀದಿಪದಿ ವ್ಯಾಪಾರಿಗಳ ಕೋಟ್ಯಂತರ ಅನುದಾನವನ್ನು ಅಧಿಕಾರಿಗಳು ಗುಳುಂ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಬೀದಿ ವ್ಯಾಪಾರಿಗಳಿಗೆ ರೊಚ್ಚಿಗೆದ್ದು ಜಿಲ್ಲಾ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಿರುದ್ಧ ಬೀದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಮೂರು ವರ್ಷಗಳಲ್ಲಿ 11, ಕೋಟಿ ಅನುದಾನ ಬಂದಿದ್ದು, ಕೇವಲ 35 ಲಕ್ಷ ಮಾತ್ರ ತರಬೇತಿ ನೀಡಿ ಅನುದಾನವನ್ನು ಗುಳುಂ ಮಾಡಿದ್ದಾರೆ. ಇನ್ನುಳಿದ 10.5 ಕೋಟಿ ಎಲ್ಲಿ ಹೋಗಿದೆ ಅಂತ ಬೀದಿಬದಿ ವ್ಯಾಪಾರಿಗಳು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆ ಬೆನ್ನಲೆ ಜಿಲ್ಲಾ ಅಧಿಕಾರಿ ವೈಶಾಲಿ ಪರಿಶೀಲ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Related