ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆ

ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆ

ಬೆಂಗಳೂರು: ಬಸವ ಪಥದ ಎಲ್ಲ ಓದುಗರಿಗೂ, ಲೇಖಕರಿಗೂ, ಕವಿಗಳಿಗೂ ಮತ್ತು ಬಸವಾನುಯಾಯಿಗಳಿಗೂ ಮುಂಬರುವ ಬಸವ ಜಯಂತಿ 2024ರ ಹೃದಯಪೂರ್ವಕ ಶುಭಾಶಯಗಳು. ಈ ವರ್ಷದ ಬಸವ ಜಯಂತಿಯನ್ನು ಸ್ಥಾವರ ಸ್ವರೂಪದಲ್ಲಿ ಆಚರಿಸದೆ, ಜಂಗಮ ಸ್ಥರೂಪಗೊಳಿಸುವುದಕ್ಕಾಗಿ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಕೇಂದ್ರ ಬಸವ ಸಮಿತಿ ನಿರ್ಣಯಿಸಿದೆ. ಸರ್ವರು ಈ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನು ಯಶಸ್ವಿಗೊಳಿಸಲು ವಿನಂತಿಸಿಕೊಳ್ಳುತ್ತೇವೆ ಎಂದು ಬಸವ ಸಮಿತಿಯ ಅದ್ಯಕ್ಷರಾದ ಡಾ. ಅರವಿಂದ ಜತ್ತಿ ತಿಳಿಸಿದರು.

ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಪ್ರಬಂಧಕ್ಕೆ ಆಯ್ದುಕೊಳ್ಳಬಹುದಾದ ವಿಷಯಗಳು: ಅರಿವು-ಆಚಾರ-ಅನುಭಾವ ,ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ, ವಚನ ಚಳುವಳಿ ಸಾಂಸ್ಕೃತಿಕ ಮುಖಾಮುಖಿ, ರಾಜಪ್ರಭುತ್ವ, ಪ್ರಜಾಪ್ರಭುತ್ವ ಮತ್ತು ಶರಣರ ಪ್ರಜ್ಞಾಪ್ರಭುತ್ವ

ಕವನದ ವಿಷಯ,

ಬಸವಾದಿ ಶರಣರ ತತ್ವಗಳಿಗೆ ಸೀಮಿತವಾಗಿರತಕ್ಕದ್ದು , ಆಯ್ಕೆಯಾದ ಪ್ರಬುದ್ಧ ಪ್ರಬಂಧ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ.25,000/-, ರೂ.10,000/- ಮತ್ತು ರೂ.5,000/-ಗಳನ್ನು ಹಾಗೂ ಆಯ್ಕೆಯಾದ ಕವನಗಳ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ನಗದು ರೂಪದಲ್ಲಿ ತಲಾ ರೂ 10,000/-, ರೂ 5,000/-ರೂ 3,000/-.

ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯ ವಿಶೇಷ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.

ಪ್ರಬಂಧ ಮತ್ತು ಕವನ ಸ್ಪರ್ಧೆಯ ನಿಯಮಗಳು 1. ತಮ್ಮ ಪ್ರಬಂಧಗಳು ಮತ್ತು ಕವನಗಳು ಸ್ವ-ರಚಿತವಾಗಿರಬೇಕು.

ತಮ್ಮ ಪ್ರಬಂಧಗಳು ಹಾಗೂ ಕವನಗಳು ಯಾವುದೇ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಪ್ರಕಟಗೊಂಡಿರಬಾರದು.

ಪ್ರಬಂಧಗಳು 2000 ಪದಗಳ ಮಿತಿಯಲ್ಲಿರಬೇಕು.

ಪ್ರಬಂಧಗಳು ಮತ್ತು ಕವನಗಳು ನುಡಿ ತಂತ್ರಾಂಶದಲ್ಲಿ (ನುಡಿ 01 ಇ, ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್ ಫೈಲ್ (MS-WORD) ಮತ್ತು ಪಿಡಿಎಫ್ (PDF) ರೂಪದಲ್ಲಿ ತಮ್ಮ ಸಂಪೂರ್ಣ ವಿಳಾಸದೊಂದಿಗೆ ಕಳುಹಿಸುವುದು.

ಪ್ರಬಂಧಗಳು ಮತ್ತು ಕವನಗಳನ್ನು competition@basavasamithi.org ಇ-ಮೇಲ್‌ಗೆ ಕಳುಹಿಸಲು ಸೂಚಿಸಿದರು. ತಮ್ಮ ಪ್ರಬಂಧ ಮತ್ತು ಕವನಗಳನ್ನು ದಿನಾಂಕ: 31.03.2024ರ ಒಳಗಾಗಿ ತಲುಪುವಂತೆ ಬಸವ ಸಮಿತಿಯ ವಿಳಾಸಕ್ಕೆ (ಇ-ಮೇಲ್competition@basavasamithi.org)

ನಿಗದಿತ ದಿನಾಂಕದ ನಂತರ ಬಂದ ಪ್ರಬಂಧ ಮತ್ತು ಕವನಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದರು.

Related