ರಿಯಾಕ್ಟ್ ಪ್ರಾಡಕ್ಟ್ ಕಂಪನಿ ಆರಂಭ

ರಿಯಾಕ್ಟ್ ಪ್ರಾಡಕ್ಟ್ ಕಂಪನಿ ಆರಂಭ

ಪೀಣ್ಯ ದಾಸರಹಳ್ಳಿ : ಸಮಾಜದ ಮತ್ತು ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಭೀರಬಾರದೆಂಬ ಉದ್ದೇಶದಿಂದ ಸೈಯದ್ ಮಸ್ತಾನ್ ಮತ್ತು ಸಂಗಡಿಗರು ಆರ್ಗ್ಯಾನಿಕ್ ಪ್ರಾಡಕ್ಟ್ ಫ್ಯಾಕ್ಟರಿ ಸ್ಥಾಪಿಸಿರುವುದು ಶ್ಲಾಘನೀಯ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯುವಜನ ಪ್ರಾಧಿಕಾರ ಅಧ್ಯಕ್ಷ ಎ.ರವಿ ಹೇಳಿದರು.

ಈ ವೇಳೆ ಮಾತನಾಡಿ, ಪೀಣ್ಯ 2ನೇ ಹಂತದ ಗಣಪತಿ ನಗರದಲ್ಲಿರುವ ನೂತನ ರಿಯಾಕ್ಟ್ ಆರ್ಗ್ಯಾನಿಕ್ ಪ್ರಾಡೆಕ್ಟ್ ಕಂಪನಿ ಉದ್ಘಾಟಿಸಿ, ಸ್ವಚ್ಛಭಾರತ್ ಪರಿಕಲ್ಪನೆಯನ್ನು ಮೋದಿಜಿ ತಂದಿದ್ದಾರೆ. ನಾವೆಲ್ಲರೂ ಪರಿಸರ ಸ್ವಚ್ಛವಾಗಿಟ್ಟು ಕೊಂಡು ಈ ಕೋವಿಡ್ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸೋಣ ಎಂದು ತಿಳಿಸಿದರು.

ಮಾಲೀಕ ಸೈಯದ್ ಮಸ್ತಾನ್ ಮಾತನಾಡಿ, ಈ ನಮ್ಮ ಕಂಪನಿಯ ಆರ್ಗ್ಯಾನಿಕ್ ಪ್ರಾಡಕ್‌ಗಳು ಕಡಿಮೆ ಬೆಲೆಗೆ ನೀಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದರು.

ಈ ಸಂದರ್ಭದಲ್ಲಿ ತಂಬಯ್ಯ ಸುಂದರಂ, ಸೈಯದ್ ಮಸ್ತಾನ್, ರವಿ, ಪ್ರತಾಪ್, ರಾಜಗೋಪಾಲ್ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಶಿವರಾಜು ಅನೇಕರು ಸೇರಿ ಇನ್ನಿತರರಿದ್ದರು.

Related