ಬೊಮ್ಮನಹಳ್ಳಿಯಲ್ಲಿ ಶ್ರೀ ರಾಮನವಮಿ ಸಂಭ್ರಮ

ಬೊಮ್ಮನಹಳ್ಳಿಯಲ್ಲಿ ಶ್ರೀ ರಾಮನವಮಿ ಸಂಭ್ರಮ

ಬೆಂಗಳೂರು: ಇಂದು ಶ್ರೀ ರಾಮನವಮಿ. ಚೈತ್ರಮಾಸದ ಒಂಬತ್ತನೇ ದಿನ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನನಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ. ಹೀಗಾಗಿ ಸಂಭ್ರಮ ಹೆಚ್ಚು.

ಇಂದು ದೇಶದಾದ್ಯಂತ ರಾಮನವಮಿಯ ಸಂಭ್ರಮ ಮನೆ ಮಾಡಿದ್ದು ಎಲ್ಲ ರಾಮಭಕ್ತರು ರಾಮನ ಜಪ ಮಾಡುತ್ತಾ, ವಿಶೇಷವಾಗಿ ದೇವಾಲಯಗಳಲ್ಲಿ ಪಾನಕ, ಮಜ್ಜಿಗೆ ಮಾಡಿ ರಾಮನ ಹೆಸರಲ್ಲಿ ವಿತರಿಸಲಾಗುತ್ತಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಾದ್ಯಂತ ಇಂದು ರಾಮನವಮಿಯ ಪ್ರಯುಕ್ತ ಆಂಜನೇಯ ದೇವಾಲಯದಲ್ಲಿ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ರಾಮನಿಗೆ ಪೂಜೆ ಸಲ್ಲಿಸಿ ಸ್ವತಃ ತಮ್ಮ ಕೈಯಾರ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದ್ದಾರೆ. ಶ್ರೀ ರಾಮನವಮಿ ಅಂಗವಾಗಿ ಶಾಸಕ ಎಂ ಸತೀಶ್ ರೆಡ್ಡಿ ಅವರ ಸ್ವಗ್ರಾಮವಾಗಿರುವಂತಹ ಹೊಂಗಸಂದ್ರದಲ್ಲಿ ಗ್ರಾಮದಲ್ಲಿರುವಂತ ಆಂಜನೇಯ ಸ್ವಾಮಿಗೆ ದೇವಸ್ಥಾನದಲ್ಲಿ ವಿಶೇಷ ಪೂಜ್ಯ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ ಸ್ವತಹ ವಿತರಿಸಿದರು.

ಇನ್ನು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ವಿಶೇಷ ಕಾಳಜಿ ದೇಶದಲ್ಲಿ ಇಲ್ಲಿಯವರೆಗೆ ಯಾವ ನಾಯಕರು ಕೂಡ ಮಾಡಿಲ್ಲ ಎಂದು ಹೇಳಿದರು. ಮೋದಿ ಸರ್ಕಾರದ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದ್ದು ಇಂದು ಇದು ಇಡೀ ಹಿಂದೂ ಜನಾಂಗಕ್ಕೆ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ರಾಮ ಜನ್ಮಭೂಮಿ ದೇವಸ್ಥಾನವನ್ನು ಕನಿಷ್ಠ ಇಲ್ಲಿಯವರೆಗೂ ಯಾರು ದರ್ಶನ ಮಾಡದಿರುವುದು ದುರ್ದೈವವೆಂದು ತಿಳಿಸಿದರು.

ಇನ್ನು ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ ಬಾಬುರೆಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದರು.

Related