ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ

ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ

ಕೆ.ಆರ್ ಪುರಂ : ವ್ಯಾಪ್ತಿಯಲ್ಲಿ ಕಿವಿಗಡಚಿಕ್ಕುವ ಕರ್ಕಶ ಹಾರ್ನ್ ಹಾಗೂ ಹೈ ಬಿಮ್ ಹೆಡ್ ಲೈಟ್ಸ್ ಬಳಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 10ಕ್ಕೂ ಅಧಿಕ ವಾಹನಗಳಿಂದ ಅಂತಹ ಕರ್ಕಶ ಹಾರ್ನ್ ಸಲಕರಣೆಗಳನ್ನು ಕಿತ್ತೆಸೆಯಲಾಯಿತು.

ಹಾಗೂ ಇವುಗಳನ್ನು ಮತ್ತೊಮ್ಮೆ ಅಳವಡಿಸಿದರೆ ಅಂತಹ ವಾಹನಗಳ ಮೂಲ ಆರ್ಸಿ ಪುಸ್ತಕವನ್ನು ವಶಕ್ಕೆ ಪಡೆದು,ಅವುಗಳನ್ನು ಅಮಾನತು ಪಡಿಸಲು ಆರ್ ಟಿ ಒ ಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಸಂಚಾರ ನಿಯಮ ಉಲ್ಲಂಘಿಸಿ ಹೂಡಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆದುರಾಗಿ ಕೇಂದ್ರ ಸರ್ಕಾರದ ಆಹಾರ ನಿಗಮಕ್ಕೆ ಸೇರಿದ ವಾಹನಕ್ಕೂ ಕೆ.ಆರ್.ಪುರಂ ಸಂಚಾರ ಪೊಲೀಸ್ ಠಾಣಾಧಿಕಾರಿ ಎಂ.ಎ. ಮಹಮದ್ ರವರು 1100/ರೂ.ಗಳ ದಂಡ ವಿಧಿಸಿದರು.

Related