ಸಂಗೀತದ ಧೃವತಾರೆ ಎಸ್‍ಪಿಬಿ ವಿಧಿವಶ

ಸಂಗೀತದ ಧೃವತಾರೆ ಎಸ್‍ಪಿಬಿ ವಿಧಿವಶ

ಸಂಗೀತ ದಿಗ್ಗಜ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಕೊರೋನಾ ಕಾರಣ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್‍ಪಿಬಿ 50 ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ 24 ಗಂಟೆಯಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆದರೆ ಅವರು ಇಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ.

ಗಾಯನ ಲೋಕ:
1966ರಲ್ಲಿ ಗಾಯನ ಆರಂಭಿಸಿದ ಇವರು, ಸುಮಾರು 16 ಭಾಷೆಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದರು. ಐದುವರೆ ದಶಕಗಳ ಕಾಲ ಸಂಗೀತ ಲೋಕ ಆಳಿದ ಮಹಾನ್ ಗಾಯಕ ಎಸ್‍ಪಿಬಿ ಅವರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಸಂಗೀತ ಲೋಕಕ್ಕೆ ಅರ್ಪಿಸಿದವರು. 56 ವರ್ಷಗಳ ಕಾಲ ಸಂಗೀತ ಲೋಕದಲ್ಲಿ ಇವರು ಹಾಡಿದ ಶಂಕರಾಭರಣಂ ಹಾಡು ಇಂದಿಗೂ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡದಲ್ಲಿ ಒಂದೇ ದಿನ 17 ಹಾಡುಗಳ ಧ್ವನಿ ಮುದ್ರಣ, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳ ಧ್ವನಿಮುದ್ರಣ, ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳ ಕಿರೀಟ ಧರಿಸಿದವರು. 25 ಬಾರಿ ಆಂಧ್ರ ಸರ್ಕಾರದ ನಂದಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ನಾಲ್ಕು ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಸಾಧಕ ಕೂಡ ಹೌದು. ಹಲವು ಭಾಷೆಗಳಲ್ಲೂ ಸಾಕಷ್ಟು ಪ್ರಶಸ್ತಿ ಪುರಸ್ಕಾರ ಪಡೆದ ಇವರು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸಾಧನೆ ಮಾಡಿದ್ದಾರೆ.

Related