ಇತ್ತೀಚಿನ ದಿನಗಳಲ್ಲಿ ಫುಡ್ ಡೆಲಿವರಿ ಪಾರ್ಸೆಲ್ಗಳು ಹೆಚ್ಚುತ್ತಿದೆ. ಅದರಂತೆ ಫುಡ್ ಡೆಲಿವರಿ ಆ್ಯಪ್ಗಳೂ ಹೆಚ್ಚುತ್ತಿದೆ. ಆದರೆ ಕೆಲವೊಮ್ಮೆ ಫುಡ್ ಡೆಲಿವರಿ ಸರ್ವಿಸ್ ಬಗ್ಗೆ ಕೆಲ ಆರೋಪಗಳು ಇದ್ದೇ ಇದೆ.
ಇತ್ತೀಚಿಗೆ ಗ್ರಾಹಕರೊಬ್ಬರು ತಮ್ಮ ಫುಡ್ ಡೆಲಿವರಿ ಪಾರ್ಸೆಲ್ ನಲ್ಲಿ ಆಹಾರದ ಜೊತೆಗೆ ಹಾವಿನ ಚರ್ಮ ಸಿಕ್ಕಿದ್ದು, ಗ್ರಾಹಕ ಹೌಹಾರಿದ್ದಾರೆ.
ತಿರುವನಂತಪುರಂನ ನೆಡುಮಂಗಾಡು ಪ್ರದೇಶದ ಹೋಟೆಲ್ನಿಂದ ಪರೋಟಾ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಪ್ಯಾಕ್ ಮಾಡಲು ಬಳಸಿದ ಕಾಗದದಲ್ಲಿ ಸುತ್ತಿದ ಹಾವಿನ ಚರ್ಮ ಸಿಕ್ಕಿದೆ.
ಈ ಬಗ್ಗೆ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪರೋಟ ತಯಾರಿಸಿದ್ದ ಹೋಟೆಲ್ ಅನ್ನು ಮುಚ್ಚಲಾಗಿದೆ.