ಬೀದಿ ಬದಿ ವ್ಯಾಪಾರಿಗಳಿಗಾಗಿ ಕಿರು ಸಾಲ ಮೇಳ

ಬೀದಿ ಬದಿ ವ್ಯಾಪಾರಿಗಳಿಗಾಗಿ ಕಿರು ಸಾಲ ಮೇಳ

ಶಹಾಪುರ : ನಗರದ ಬೀದಿ ಬದಿ ವ್ಯಾಪರಸ್ಥರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮುದಾಯ ಸಂಘಟನಾಧಿಕಾರಿ ಸದಸ್ಯ ಕಾರ್ಯದರ್ಶಿ ದೇವಿಂದ್ರ ಹೆಗಡೆ ಹೇಳಿದರು.

ನಗರದ ಡಿಗ್ರಿ ಕಾಲೇಜು ಹತ್ತಿರ ವಿರುವ ಟೌನ್ ಹಾಲ್‌ನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಬೀದಿ ಬದಿ ವ್ಯಾಪರಸ್ಥರಿಗೆ ಡೇ ನಲ್ಮಾ ಯೋಜನೆಯ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆ ಯಡಿಯಲ್ಲಿ ಪೌರಾಯುಕ್ತ ರಮೆಶ್ ಪಟ್ಟೇದಾರ್ ಅವರ ಮಾರ್ಗದರ್ಶನದಲ್ಲಿ ಆನ್‌ಲೈನ್ ಮೂಲಕ 10.000 ರೂ. ಅರ್ಜಿ ಸಲ್ಲಿಸಿದ ವ್ಯಾಪರಸ್ಥರಿಗೆ ಸಾಲ ವಿತರಣೆ ಮಾಡಲು ಸಾಲ ಮೇಳ ಆಯೋಜಿಸಿದ್ದು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ ಹೆಚ್ಚಿನ ಸಾಲ ಪಡೆಯಿರಿ. ಬೀದಿ ವ್ಯಾಪರಸ್ಥರು ಕಡ್ಡಾಯವಾಗಿ ನಗರಸಭೆಯಲ್ಲಿ ನೊಂದಣಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು ಕೊರೋನಾ ಸೋಂಕು ಲಾಕ್‌ಡೌನ್ ಪರಿಣಾಮದಿಂದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕಿರು ಸಾಲ ಯೋಜನೆಯನ್ನು ಜಾರಿಗೊಳಿಸಿದ್ದು ವ್ಯಾಪರಸ್ಥರು ಸಾಲ ಸೌಲಭ್ಯವನ್ನು ಪಡೆದುಕೊಳ್ಳಿ ಎಂದರು.

ಈ ವೇಳೆ ಜಿಲ್ಲಾ ಕೌಶಲ್ಯ ಮೀಶನ್ ಅಭಿಯಾನ ವ್ಯವಸ್ಥಾಕರು ವಿಜಯಕುಮಾರ ಪಾಟೀಲ್ ಮಾತಾನಾಡಿ, ಈಗಾಗಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಇನ್ನೂ ಸಾಲ ಮಂಜೂರಾತಿಯಾಗದ ಹಾಗೂ ಪ್ರಧಾನ ಮಂತ್ರಿ ಯೋಜನೆ ಯಡಿಯಲ್ಲಿ 2000 ಸಹಾಯಧನ ಪಡೆಯದ ಫಲಾನುಭವಿಗಳಿಗೆ ಬ್ಯಾಂಕಿನೊಂದಿಗೆ ಆಧಾರ ಕಾರ್ಡ್ ಮತ್ತು ಮೊಬೈಲ್ ನಂಬರ್ ಹೊಂದಾಣಿಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈಗಾಗಲೇ 10.000 ರೂ. ಸಾಲ ಪಡೆದು ಸರಿಯಾಗಿ ಮರು ಪಾವತಿ ಮಾಡಿದ ಫಲಾನುಭವಿಗಳಿಗೆ 20.000 ರೂ. ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಸಾಲ ಮಂಜೂರಿ ಮಾಡುಲಾಗುವುದು ಎಂದರು. ಮೇಳದಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಶಿಫಾರಸ್ಸು ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಭಿಯಾನ ವ್ಯವಸ್ಥಾಪಕರಾದ ಗುರುಪಾದಪ್ಪ ತಳವಾರ, ಸಮುದಾಯ ಸಂಘಟಕರು ದುರ್ಗಪ್ಪ ನಾಯಕ್, ಅಮೃತ್ ಹೂಗಾರ್, ಸುಬಾನ್, ನಾಗಣ್ಣ ಹೂಗಾರ, ಸುಗ್ರೀವ್, ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮಿಣ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಸುಕೋ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕರುಗಳು, ದುರ್ಗಪ್ಪ ನಾಯಕ, ನರಸಿಂಹ ಮೂರ್ತಿ, ಹಣಮಂತ ಯಾದವ್, ವ್ಯಾಪರಸ್ಥರು ಇನ್ನಿತರರಿದ್ದರು.

Related