ಲಾಂಗ್ ಕೈಯಲ್ಲಿ ಪೆನ್ ಹಿಡಿದ ಶಿವಣ್ಣ.!

ಲಾಂಗ್ ಕೈಯಲ್ಲಿ ಪೆನ್ ಹಿಡಿದ ಶಿವಣ್ಣ.!

ಬೆಂಗಳೂರು, ಮಾ.06 : ಲಾಂಗ್ ಮಚ್ಚು ಬಿಟ್ಟು ಈ ಬಾರಿ ಕೈಯ್ಯಲ್ಲಿ ಪೆನ್ ಹಿಡಿದು ಸ್ಕೂಲ್ ಮಾಸ್ಟರ್ ಆಗಿ ಬರ್ತಿದ್ದಾರೆ. ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಲಾಂಗ್ ಹಿಡಿತಿದ್ದ ಕೈಯಲ್ಲಿ ಪೆನ್ ಹಿಡಿದು ಬರ್ತಿರೋ ಶಿವಣ್ಣ.!
ಹೊಸಬರ ಮದ್ವೆ ಕಥೆ ಜೊತೆಗೆ ತೆರೆಮೇಲೆ ರಾಜನ ದರ್ಬಾರ್
ದ್ರೋಣ..ದಿ ಮಾಸ್ಟರ್ ಅನ್ನೋ ಟ್ಯಾಗ್ಲೈನ್ ಜೊತೆಗೆ ಟ್ರೈಲರ್ ಮತ್ತು ಹಾಡುಗಳಿಂದ ಕುತೂಹಲ ಹುಟ್ಹಾಕಿರೋ ಸಿನಿಮಾ. ಗೌರ್ಮೆಂಟ್ ಸ್ಕೂಲ್, ಅಲ್ಲಿನ ವ್ಯವಸ್ಥೆ, ಮಕ್ಕಳ ಕಲಿಕೆ, ಬದಲಾವಣೆ ಜೊತೆಗೆ ಒಂದು ಶಾಲೆಗೆ ಶಿಕ್ಷಕನಿಗಿಂತ ಹೆಚ್ಚಾಗಿ ಒಬ್ಬ ಗುರುವಿನ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ಚಿತ್ರದಲ್ಲಿ ತೋರಿಸಲಾಗಿದೆ. ಸೋಶೀಯಲ್ ಮೆಸೇಜ್ ಅಷ್ಟೇ ಅಲ್ದೆ, ಲವ್ , ಆ್ಯಕ್ಷನ್, ಕಾಮಿಡಿ ಕೂಡ ಸಿನಿಮಾದಲ್ಲಿದೆ.
ಸಿನಿಮಾದಿಂದ ಸಿನಿಮಾಗೇ ವಿಭಿನ್ನ ಪಾತ್ರಗಳಲ್ಲಿ ಮಿಂಚೋ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತೊಂದು ಹೊಸ ಕ್ಯಾರೆಕ್ಟರ್ನಲ್ಲಿ ಸಿನಿಪ್ರಿಯರನ್ನ ಎಂಟರ್ಟೈನ್ ಮಾಡೋಕ್ಕೆ ಬರ್ತಿದ್ದಾರೆ. ರಂಗಾಯಣ ರಘು, ಬಾಬು ಹಿರಣಯ್ಯ, ಸ್ವಾತಿ ಶರ್ಮಾ, ನಾರಾಯಣ ಸ್ವಾಮಿ ಹೀಗೆ ಸಾಕಷ್ಟು ಹಿರಿತೆರೆ, ಕಿರುತೆರೆ ಹಾಗೂ ಹೊಸ ಕಲಾವಿದರ ದಂಡೇ ಚಿತ್ರದಲ್ಲಿದೆ.
ಇನ್ನು ದ್ರೋಣ ಸಿನಿಮಾ ಜೊತೆಗೆ ತೆರೆಕಾಣ್ತಿರೋ ಮತ್ತೊಂದು ಚಿತ್ರ . ಮದುವೆ ಮಾಡ್ರಿ ಸರಿ ಹೋಗ್ತಾನೇ. ಇದೊಂದು ಹಳ್ಳಿ ಸೊಗಡಿನ ಕಥೆಯಾಗಿದ್ದು, ಕೆಲಸ ಕಾರ್ಯ ಬಿಟ್ಟು, ತರ್ಲೆ ಮಾಡ್ಕೊಂಡು ಊರ್ ಸುತ್ಕೊಂಡು ಇರೋ ಚಿತ್ರದ ನಾಯಕನಿಗೆ ಮದುವೆ ಮಾಡಿದ್ರೆ ಸರಿ ಹೋಗ್ತಾನೇ ಅಂತ ಊರಿನ ಜನ ಹೇಳ್ತಾರೆ. ಆದ್ರೆ ಆತ ಮದುವೆ ಆಗ್ತಾನಾ? ಆಮೇಲೆ ಸರಿ ಹೋಗ್ತಾನಾ ಅನ್ನೋದನ್ನ ಸಿನಿಮಾದಲ್ಲೇ ನೋಡ್ಬೇಕು.
ಈಗಾಗ್ಲೇ ಫನ್ ಎಂಟರ್ಟೈನಿಂಗ್ ಆಗಿರೋ ಟ್ರೈಲರ್ ಸಿನಿಪ್ರಿಯರ ಮನ ಗೆದ್ದಿದ್ದು, ಶಿವಚಂದ್ರಕುಮಾರ್, ಆರಾದ್ಯ ಲೀಡ್ ರೋಲ್ನಲ್ಲಿ ಮಿಂಚಿದ್ದು,ಗೋಪಿ ಕೆರೂರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ ಕ್ರೇಜಿಸ್ಟಾರ್ ಅಭಿನಯದ ಪ್ರೇಮಲೋಕ ಸಿನಿಮಾದಂತೆ ಈ ಚಿತ್ರದಲ್ಲೂ 11 ಹಾಡುಗಳಿವೆ. ಚಿತ್ರಕ್ಕೆ ಅವಿನಾಶ್ ಬಾಸುತ್ಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Related