ಶಿರಸಿ ಮಾರಿಕಾಂಬಾ ಜಾತ್ರೆ

ಶಿರಸಿ ಮಾರಿಕಾಂಬಾ ಜಾತ್ರೆ

ಶಿರಸಿ, ಮಾ.4 : ಉತ್ತರಕನ್ನಡ ಜಿಲ್ಲೆಯ  ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಪೂರ್ವವಿಧಿವಿಧಾನಗಳೊಂದಿಗೆ ಮಂಗಳವಾರ ಆರಂಭವಾಗಿದೆ. ನಸುಕಿನಲ್ಲಿ ಕಲಶ ಪೂಜೆ, ದೇವಾಲಯದ ಎದುರಿನ ರಥದ ತುದಿಯಲ್ಲಿ ಕಲಶ ಆರೋಹಣದ ವಿಧಿವಿಧಾನವನ್ನು ಮಧ್ಯಾಹ್ನ 12.43ರ ಮುಹೂರ್ತದಲ್ಲಿ ನೆರವೇರಿಸಲಾಯಿತು.
ಶೋಭಾಯಾತ್ರೆ ಇಂದು: ದೇವಾಲಯದಿಂದ ಅರ್ಧ ಕಿಮೀ ದೂರದ ಬಿಡ್ಕಿಬಯಲಿನ ಜಾತ್ರಾ ಗದ್ದುಗೆಯಲ್ಲಿ ದೇವಿ ಪ್ರತಿಷ್ಠಾಪನೆ ಕಾರ್ಯ ಮಾ.4ರ ಬೆಳಗ್ಗೆ ನೆರವೇರಲಿದೆ. ಇದಕ್ಕೂ ಮುನ್ನ ಮಾರಿಕಾಂಬಾ ದೇವಿ ರಥಾರೋಹಣ, ಸಹಸ್ರಾರು ಭಕ್ತರ ಭಕ್ತಿ ಸಂಭ್ರಮದ ಮಧ್ಯ ರಥೋತ್ಸವ ನಡೆಯಲಿದೆ.

Related