ಛೇ ಇವನೆಂತಹ ವೈದ್ಯ

  • In State
  • February 22, 2020
  • 259 Views
ಛೇ ಇವನೆಂತಹ ವೈದ್ಯ

ಸೂರತ್, ಫೆ. 22 : ಗುಜರಾತಿನ ನಗರ ಪಾಲಿಕೆಯ ಟ್ರೇನಿ ಮಹಿಳಾ ಸಿಬ್ಬಂದಿಯನ್ನು ದೈಹಿಕ ಪರೀಕ್ಷೆ ಹೆಸರಿನಲ್ಲಿ ಬೆತ್ತಲೆ ಮಾಡಿದ ಹೇಯ ಘಟನೆ ನಡೆದಿದೆ. ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಕಾಲೇಜಿನಲ್ಲಿ ಒಳ ಉಡುಪು ಬಿಚ್ಚಿ ನೋಡ್ತಾರೆ. ಅಷ್ಟೇ ಅಲ್ಲದೆ ವೈದ್ಯರು ಮನಸ್ಸಿಗೆ ಬಂದಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಟ್ರೇನಿ ಸಿಬ್ಬಂದಿ ನೇಮಕಕ್ಕೂ ಮುನ್ನ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೂರು ಮಂದಿಯನ್ನು ಸೂರತ್ ಮುನ್ಸಿಪಲ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಅಲ್ಲಿ ತಲಾ ಹತ್ತು ಮಂದಿಯ ತಂಡ ಮಾಡಿ ಕೊಠಡಿಯಲ್ಲಿ ಬೆತ್ತಲೆ ನಿಲ್ಲಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯ.
ಪುರುಷರಿಗೆ ಮಾತ್ರ ಸಾಮಾನ್ಯ ವೈದ್ಯಕೀ ಪರೀಕ್ಷೆ ಮಾಡಲಾಗಿದೆ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Related