ಚಿಕ್ಕಶಿಂಗನಗುತ್ತಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಚಿಕ್ಕಶಿಂಗನಗುತ್ತಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಇಳಕಲ್, ಮಾ. 14: ಇಳಕಲ್ ತಾಲೂಕಿನ ಚಿಕ್ಕಶಿಂಗನಗುತ್ತಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ. ಸಾಮೂಹಿಕ ವಿವಾಹ ಮಹೋತ್ಸವದಲ್ಲಿ  ಹೊಸ ಜೀವನಕ್ಕೆ ಕಾಲಿಟ್ಟ ನಾಲ್ಕು ಜೋಡಿಗಳು.

ಇಳಕಲ್ ತಾಲೂಕಿನ ಚಿಕ್ಕಶಿಂಗನಗುತ್ತಿ ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನೆನ್ನ ಬೆಳಿಗ್ಗೆ ಶರಣಬಸವೇಶ್ವರರ ಮೂರ್ತಿಗೆ ವಿಷೇಶ ಪೂಜೆ ಅಭಿಷೇಕ ಸಲ್ಲಿಸಲಾಯಿತು. ನಂತರ ಶಿರೂರ ಮಹಾಂತ ತೀರ್ಥದ ಪೂಜ್ಯರ ಸಮ್ಮುಖದಲ್ಲಿ  ಬಸವತತ್ವದ ಅನುಸಾರ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ  ನಾಲ್ಕು ಜೋಡಿಗಳು ಹೊಸಜೀವನಕ್ಕೆ ಕಾಲಿರಿಸಿದರು.

ನಂತರ ಮಾತನಾಡಿದ ಪೂಜ್ಯರು, ನೆರೆದಿದ್ದ ಭಕ್ತ ಸಮೂಹಕ್ಕೆ ಹಾಗೂ ನವಧುವರರಿಗೆ ಆಶೀರ್ವದ ನೀಡಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ  ಒಂದು ಬೇಕು ಎರಡು ಸಾಕು ಎನ್ನುವಂತೆ ನಿಮ್ಮ ಕುಟುಂಬವನ್ನು ಚಿಕ್ಕ ಹಾಗು ಚೊಕ್ಕದಾಗಿರಿಕೊಳ್ಳುವಂತೆ ನವಜೋಡಿಗಳಿಗೆ  ಕಿವಿಮಾತು ಹೇಳಿದರು. ಕಾರ್ಯಕ್ರಮದ ನಂತರದಲ್ಲಿ ಭಕ್ತಸಮೂಹಕ್ಕೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.  ಸಂಜೆ   ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.

Related