ವದಂತಿಗಳಿಗೆ ಕಿವಿಗೊಡಬೇಡಿ: ಸತೀಶ್ ರೆಡ್ಡಿ

ವದಂತಿಗಳಿಗೆ ಕಿವಿಗೊಡಬೇಡಿ: ಸತೀಶ್ ರೆಡ್ಡಿ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸೋಮಮವಾರ ನಾಮ ಪತ್ರ ಸಲ್ಲಿಕೆ ವೇಳೆ ಯಾವುದೇ ರೀತಿಯ ವಾದ ವಿವಾದ ಮತ್ತಿತರೆ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಸರ್ಕಾರಿ ಮುಖ್ಯ ಸಚೇತಕರು ಹಾಗು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಘಟನೆಗಳು ನಡೆದಿಲ್ಲ. ಸೋಮವಾರದಿಂದ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಷ್ಯಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಹಾಸ್ಯಾಸ್ಪದ ಮತ್ತು ಸುಳ್ಳು ಮಾಹಿತಿ ಸೃಷ್ಠಿಸಿ ಹರಿಬಿಡಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೈಜ ಘಟನೆಯನ್ನು ವ್ಯವಸ್ಥಿತ ಸಂಚಿನೊಂದಿಗೆ ತಿರುಚಿರುವ ಕೆಲವು ಕಿಡಿಗೇಡಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹಬಿಟ್ಟಿದ್ದಾರೆ ಇದೊಂದು ವ್ಯಸ್ಥಿತ ಷಢ್ಯಂತ್ರವಾಗಿದ್ದು ನಮ್ಮ ಬೊಮ್ಮನಹಳ್ಳಿ ಕ್ಷೇತ್ರದ ಜನತೆ ಇಂತಹ ಸುಳ್ಳು ಸುದ್ದಿಗಳಿಗೆಲ್ಲ ಕಿವಿಗೊಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ನಾನು ಬಿಜೆಪಿ ಪಕ್ಷ ವಹಿಸಿದ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುತ್ತ ಜನ ಸೇವಕನಾಗಿ ಕರ್ತವ್ಯ ನಿರತನಾಗಿದ್ದೇನೆ ಎಂದ ಅವರು, ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುವ ಮೂಲಕ ಕಪ್ಪು ಚುಕ್ಕೆ ಅಂಟಿಸುವ ಕೃತ್ಯಕ್ಕೆ ನಮ್ಮ ಕ್ಷೇತ್ರದ ಜನತೆ ಎಂದೂ ಬೆಲೆ ಕೊಡುವುದಿಲ್ಲ ಅಂತಹವರಿಗೆ ಕ್ಷೇತ್ರದ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿದರು.
ನಾನು ನನ್ನ ಸಧೀರ್ಘ ರಾಜಕೀಯ ಜೀವನದಲ್ಲಿ ನಮ್ಮ ಪಕ್ಷದ ಬಹಳಷ್ಟು ನಾಯಕರೊಂದಿಗೆ ಒಡನಾಟ ಕೇವಲ ಒಂದೆರಡು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಗಳಲ್ಲೂ ಆತ್ಮೀಯರಿದ್ದಾರೆ. ನಮ್ಮ ಈ ಸಂಬಂದ ಯಾವುದೇ ಸಂದರ್ಭದಲ್ಲಿ ಒಂದು ಜಾತಿ ಅಥವಾ ಸಮುದಾಯದ ಓಲೈಕೆಗೆ ಹಿಂದೆ ಬಿದ್ದವನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ೧೫ವರ್ಷಗಳಲ್ಲಿ ನಾನು ಮತ್ತು ಸತೀಶ್ ರೆಡ್ಡಿ ಅವರು ಅಣ್ಣ ತಮ್ಮಂದಿರಂತೆ ಇದ್ದೇವೆ. ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ನಮ್ಮ ಮದ್ಯೆ ಹುಳಿ ಹಿಂಡುವ ಕೆಲಸ ಮಾಡಿದ್ದು ಜಾತಿ ರಾಜಕಾರಣದ ಕಿಡಿ ಹೊತ್ತಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಯವಿಟ್ಟು ಬೊಮ್ಮನಹಳ್ಳಿಯ ನಮ್ಮ ಮತದಾರ ಬಾಂಧವರಾಗಲಿ ಸಾರ್ವಜನಿಕರಾಗಲಿ ಈ ರೀತಿಯ ವದಂತಿಗಳಿಗೆ ಕಿವಿಗೊಡದೆ ಈ ಸಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಆತಿ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ಸ್ಪಷ್ಟ ಉತ್ತರ ನೀಡಬೇಕೆಂದು ಪುರುಷೋತ್ತಮ್ ರವಿ, ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಮಾಜಿ ನಗರ ಯೋಜನೆ ಅಧ್ಯಕ್ಷರು ಮನವಿ ಮಾಡಿದ್ದಾರೆ.

Related