ಕೆರೆಗಳ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಟ್ರಸ್ಟ್

ಕೆರೆಗಳ ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಟ್ರಸ್ಟ್

ಮಾಲೂರು : ರಾಜ್ಯದ ಪ್ರತಿ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ವತಿಯಿಂದ ಡಾ. ವಿರೇಂದ್ರಹೆಗಡ್ಡೆ ಅವರ ಸಹಕಾರದಿಂದ ಜನಪರ ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಅಭಿವೃದ್ದಿ ಪಡಿಸುತ್ತಿರುವುದು ತಾಲೂಕಿನ ಪುಣ್ಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ತಾಲೂಕಿನ ಚವರಮಂಗಲ ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ವತಿಯಿಂದ 10 ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ಕೆರೆಯ ಅಭಿವೃದ್ದಿ ಸಮಿತಿಗೆ ಹಸ್ತಾಂತರ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪುರಾತನ ಕಾಲದಲ್ಲಿ ಹಿರಿಯರು ನಿರ್ಮಿಸಿದ ಕೆರೆಗಳನ್ನು ಪ್ರತಿಯೊಬ್ಬ ಸಾರ್ವಜನಿಕರ, ಸರಕಾರಗಳ ಜವಾಬ್ದಾರಿಯಾಗಿದೆ. ಕರೆಗಳ ಒತ್ತುವರಿ ಮಾಡಿಕೊಂಡಿರುವುದು, ಕಟ್ಟೆಗಳು ಓಡೆದು ಹೋಗಿರುವುದು ಕಂಡು ಬರುತ್ತದೆ.

ಜತೆಗೆ ಕೆರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ವತಿಯಿಂದ 10 ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡುತ್ತಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 1500 ಆಡಿ ಕೊಳವೆ ಭಾವಿ ಕೊರಸಿದರು ನೀರು ಸಿಗುತ್ತಿಲ್ಲ. ಹಿಂದಿನ ಸರಕಾರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಸಿ.ವ್ಯಾಲಿ ನೀರು ಹರಿಸಲು 1300 ಕೋಟಿ ರೂಗಳನ್ನು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ಬತ್ತಿಹೊದ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹವಾಗಿ ಮತ್ತೆ ರೈತರು ಉತ್ತಮ ಬೆಳೆಗಳನ್ನು ಮಾಡಿ ಆರ್ಥೀಕತೆಯಿಂದ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಚವರಮಂಗಲ ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ವತಿಯಿಂದ 10 ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ಕೆರೆಯ ಅಭಿವೃದ್ದಿ ಸಮಿತಿಗೆ ಹಸ್ತಾಂತರ ಕರ‍್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರು ಕೆರೆಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದರು. ನಂತರ ಕೆರೆಯ ಅಂಗಳದಲ್ಲಿ ಸಸಿ ನೆಡುವ ಮೂಲಕ ಉಧ್ಘಾಟಿಸಿದರು.

Related