ಗ್ರಾಮೀಣ ಮಕ್ಕಳಿಗೆ ಕೌಶಲ್ಯವೂ ಇಲ್ಲ. ಕೆಲಸವೂ ಇಲ್ಲ

ಗ್ರಾಮೀಣ ಮಕ್ಕಳಿಗೆ ಕೌಶಲ್ಯವೂ ಇಲ್ಲ. ಕೆಲಸವೂ ಇಲ್ಲ

ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳಿಂದ ತರಬೇತಿ ನೀಡಿ ಕೆಲಸ ಕೊಡಿಸುವ ಜವಾಬ್ದಾರಿಯನ್ನು ಹೊಂದಿತ್ತು ಆದರೆ ಈಗ ತರಬೇತಿಯೂ ಇಲ್ಲ ಕೆಲಸವು ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ.

ಹೌದು, ರಾಜ್ಯದಲ್ಲಿ ಈ ಬಾರಿ ಗ್ರಾಮೀಣ ಮಕ್ಕಳಿಗೆ ಕೌಶಲವೂ ಇಲ್ಲ. ಕೆಲಸವೂ ಇಲ್ಲ. ಅದಕ್ಕೆ ಬೇಕಾದ ಕಾಸೂ ಸಿಗುವುದಿಲ್ಲ.

ಕಾರಣ ಈ ಬಾರಿ ಸರಕಾರ ಗ್ರಾಮೀಣ ನಿರುದ್ಯೋಗಿ ಮಕ್ಕಳಿಗೆ ಕೌಶಲ್ಯ ತರಬೇತಿಯನ್ನೂ ಕೊಡುತ್ತಿಲ್ಲ. ಅದಕ್ಕೆ ಬೇಕಾದ ಕಾಸನ್ನೂ ನೀಡುತ್ತಿಲ್ಲ. ಅಂದ ಮೇಲೆ ಕೆಲಸ ಕೇಳುವ ಪ್ರಶ್ನೆಯೇ ಉದ್ಭವಿಸುತ್ತಿಲ್ಲ. ಹಾಗಂದ ಮಾತ್ರಕ್ಕೆ ಕೌಶಲ್ಯ ಅಭಿವೃದ್ಧಿಗಾಗಿ ಸರಕಾರದಲ್ಲಿ ಹಣವಿಲ್ಲ ಅಂತೇ ನಲ್ಲ, ಯಾವ, ತರಬೇತಿಗಳನ್ನು ಯಾರಿಗೆ ನೀಡಬೇಕು. ಯಾವ ರೀತಿಯ ತರಬೇತಿ ಸಂಸ್ಥೆಗೆ ಆದ್ಯತೆ ನೀಡಬೇಕು ಎನ್ನುವ ಗೊಂದಲದಿಂದ ಈಗ ಗ್ರಾಮೀಣ ಮಕ್ಕಳ ಕೌಶಲ್ಯಕ್ಕೆ ‘ಕಲ್ಲು’ ಬೀಳುವಂತಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್ ಆದ ನಂತರ ಶಿಕ್ಷಣದಿಂದ ಹೊರಗುಳಿದ ಬಹುಪಾಲು ಯುವಕ, ಯುವತಿಯರು ನಿರುದ್ಯೋಗಿಗಳಾಗುವುದು ಮಾತ್ರವಲ್ಲದೆ, ಹಾದಿ ತಪ್ಪುವ ಸಾಧ್ಯತೆಯ ಬಗ್ಗೆಯೂ ಆತಂಕ ಶುರುವಾಗಿದೆ.

ಆದರೆ ಅಧಿಕಾರಿಗಳು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಅವರಿಗೆ ವಾಸ್ತವ ತಿಳಿಸದೆ ಅವರನ್ನೇ ಕತ್ತಲಲ್ಲಿ ಇಟ್ಟಿರುವುದು ಒಂದು ಸಮಸ್ಯೆಗೆ ಮೂಲ ಕಾರಣ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಏನಿದು ಕೌಶಲ್ಯ ಕಿರಿಕಿರಿ?

ಸರಕಾರದ ಕೌಶಲ್ಯಾಭಿವೃದ್ಧಿ ನಿಗಮ ಪ್ರತಿವರ್ಷ ಜಿಟಿಜಿಸಿ (ಹಾರ್ಡ್ ವೇರ್ ಸ್ಕಿಲ್‌ಗಳನ್ನು) ಮತ್ತು ಸರಕಾರದ ಮಾನ್ಯತೆ ಪಡೆದಿರುವ ಖಾಸಗಿ (ಟಿಸಿಗಳ) ಮೂಲಕ(ಸಾಫ್ಟ್ ಸ್ಕಿಲ್ ) ಪ್ರತಿವರ್ಷ 40 ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ತರಬೇತಿ ನೀಡುತ್ತದೆ. ಇದರಲ್ಲಿ ಜಿಟಿಟಿಸಿ ಕೈಗಾರಿಕೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಿದರೆ, (ಸಿ) ಖಾಸಗಿ ತರಬೇತಿ ಸಂಸ್ಥೆಗಳು ಕೃಷಿ, ಪ್ರವಾಸೋದ್ಯಮ, ಡೈರಿ, ಫ್ಯಾಷನ್, ಹೊಲಿಗೆಯಂತ್ರ, ಕಂಪ್ಯೂಟರ್ ತರಬೇತಿ ಹಾಗೂ ಫೀಚರ್ ಸ್ಕಿಲ್ ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ತರಬೇತಿಗಳನ್ನು ಕೊಡುತ್ತವೆ.

ಆದರೆ ಸರಕಾರ ಇದೇ ಮೊದಲ ಬಾರಿಗೆ ತರಬೇತಿಯನ್ನು ಸಂಸ್ಥೆಗಳ ಟಿಸಿಗಳ ಬದಲು ಐಟಿಐ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮೂಲಕ ನಡೆಸಲು ನಿರ್ಧರಿಸಿದೆ. ಇದರಿಂದಾಗಿ ಸಿಬ್ಬಂದಿ, ಕಟ್ಟಡ, ಲ್ಯಾಬ್ ಗಳನ್ನು ಸ್ಥಾಪನೆಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಅನೇಕ ವರ್ಷಗಳಿಂದ ತರಬೇತಿ ನಡೆಸುತ್ತಿರುವ 1250ಕ್ಕೂ ಹೆಚ್ಚು ಟಿಸಿ ಗಳು ಈಗ ಬೀದಿಗೆ ಬಂದಿವೆ. ಹಾಗೆ ನೋಡಿದರೆ, ಸರಕಾರದ ಐಟಿಐಗಳು ಸದ್ಯ ತರಬೇತಿ ನೀಡು ವಷ್ಟು ಸೌಲಭ್ಯಗಳೂ ಇಲ್ಲ. ಟಿಸಿಗಳು ನೀಡುವ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುವುದಕ್ಕೂ ಸದ್ಯಕ್ಕೆ ಸಾಧ್ಯವೂ ಇಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ತರಬೇತಿ ಕೇಂದ್ರಗಳ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

 

 

Related