ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯ!

ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯ!

ಅಗತ್ಯ ವಸ್ತುಗಳ ಖರೀದಿಗೆ ಅಂತರ ಕಾಯ್ದುಕೊಳ್ಳದೆ ಮುಗಿಬಿಳುತ್ತಿರುವ ಜನರು!

ಕೆಂಭಾವಿ : ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ವೈರಸ್ ನ 2ನೇ ಅಲೆ ತಿರ್ವವಾಗಿದ್ದು ಸರ್ಕಾರವು ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್ ಡೌನ್ ಆದೇಶ ಜಾರಿ ಗೊಳಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದೆ.
ಆದರೆ ಅಗತ್ಯ ವಸ್ತುಗಳ ಖರೀದಿಗೆ ಬರುವ ಜನ ಜಾತ್ರೆಯಲ್ಲಿ ಸೇರುತ್ತಿರುವ ಹಾಗೆ ಸೇರುತ್ತಿದ್ದು , ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ. ಮಾಸ್ಕ್ ಇಲ್ಲದೆಯೇ , ಅಂತರವನ್ನು ಕಾಯ್ದುಕೊಳ್ಳದೆ ತಾ ಮುಂದು ನೀ ಮುಂದು ಎಂದು ಖರೀದಿಗೆ ಜಮಾಯಿಸುತ್ತ್ತಿದ್ದಾರೆ. ಪಟ್ಟಣದ ಕಿರಾಣಿ ಅಂಗಡಿ ಮಾಲೀಕರು ಸಹ ಯಾವುದೇ ಕೊರೋನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುತ್ತಿಲ್ಲ. ಜನರ ಈ ನಿರ್ಲಕ್ಷ್ಯಯವೇ ಪ್ರಾಣಕ್ಕೆ ಕಂಟಕವಾಗಬಹುದು.

ವಸ್ತುಗಳ ಖರೀದಿಗೆ ಜನತೆ ಮುಗಿಬಿದ್ದು ಗಿಜುಗಿಡುತ್ತಿದ್ದರೆ, ಕೊರೋನಾ ವೈರಸ್ ಹರಡುವಿಕೆಯನ್ನು ಸರ್ಕಾರಕ್ಕಾಗಲಿ, ವೈದ್ಯರಿಗಾಗಲಿ ತಡೆಯಲು ಸಾಧ್ಯವೇ? ಇನ್ನೂ ಪಟ್ಟಣದಲ್ಲಿ ಲಾಕ್‌ಡೌನ್ ಸಂದರ್ಭದಂತಹ ಸಮಯದಲ್ಲಿ ಜನಸಂದಣಿ ನಿಯಂತ್ರಿಸುವ ಪೊಲೀಸ್ ಅಧಿಕಾರಿಗಳು ನೋಡಿಯು ನೋಡದಂತೆ ಮೌನ ವಹಿಸುತ್ತಿರುವುದು, ವಿಪರ್ಯಾಸವೇ ಸರಿ.

ವರದಿಗಾರರು ಗಿರೀಶ ಬ್ಯಾಕೋಡ್

Related