ದೊಡ್ಮನೆಯಲ್ಲಿ ಕೇಳುತ್ತಿದೆ ‘ನೆನಪಿರಲಿ’ ಪ್ರೇಮ್ ಹೆಸರು?

ದೊಡ್ಮನೆಯಲ್ಲಿ ಕೇಳುತ್ತಿದೆ ‘ನೆನಪಿರಲಿ’ ಪ್ರೇಮ್ ಹೆಸರು?

ಬಿಗ್‌ಬಾಸ್ ಕನ್ನಡ 8ನೇ ಆವೃತ್ತಿ ಆರಂಭಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಫೆ. 28 ರಂದು ಬಿಗ್‌ಬಾಸ್ ಹೊಸ ಸೀಸನ್ ಶುರುವಾಗುತ್ತಿದೆ.

ಈ ಸಲ ದೊಡ್ಮನೆಗೆ ಯಾರೆಲ್ಲ ಪ್ರವೇಶ ಮಾಡಬಹುದು ಎಂಬ ಚರ್ಚೆ ಬಹಳ ಜೋರಾಗಿ ಇದೆ. ಈ ಆವೃತ್ತಿಯಲ್ಲಿ ಕಾಮನ್‌ಮ್ಯಾನ್‌ಗಳಿಗೆ ಅವಕಾಶ ಇಲ್ಲ ಎಂದು ಬಿಗ್‌ಬಾಸ್ ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಬಿಗ್ ಮನೆಯಲ್ಲಿ ಯಾವೆಲ್ಲ ಸೆಲೆಬ್ರಿಟಿಗಳೇ ಇರ್ತಾರೆ ಎನ್ನುವ ಲೆಕ್ಕಾಚಾರ ವೀಕ್ಷಕರನ್ನು ಕಾಡ್ತಿದೆ. ಕಿರುತೆರೆ, ಸಿನಿಮಾ ಇಂಡಸ್ಟ್ರಿ, ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಕೆಲವು ವ್ಯಕ್ತಿಗಳು ದೊಡ್ಮನೆಗೆ ಅವಕಾಶ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ.

ಈ ಮಧ್ಯೆ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು ಹೆಸರು ಸಹ ಬಿಗ್‌ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಬಿಗ್‌ಬಾಸ್ ಕಾರ್ಯಕ್ರಮದ ಬಹಳ ಹತ್ತಿರದ ಮೂಲಗಳಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ ಪ್ರೇಮ್ ಅವರು ಈ ಸಲ ಬಿಗ್‌ಬಾಸ್ ಮನೆಗೆ ಬರ್ತಾರೆ ಎನ್ನಲಾಗಿದೆ.

ಪ್ರೇಮ್ ಅವರು ಸದ್ಯ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪ್ರೇಮ್ ಅಭಿನಯದ 25ನೇ ಚಿತ್ರ. ರಾಘವೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ.

Related