ಆಸ್ಪತ್ರೆಗಳಲ್ಲಿ 100 ವೈದ್ಯರ ನೇಮಕ

ಆಸ್ಪತ್ರೆಗಳಲ್ಲಿ 100 ವೈದ್ಯರ ನೇಮಕ

ಕಲಬುರಗಿ : ಆಸ್ಪತ್ರೆಗಳಲ್ಲಿ ಖಾಲಿ ವೈದ್ಯರ ಹುದ್ದೆ ತುಂಬಲು ಶೀಘ್ರವೇ 100 ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ರ‍್ತಿ ಮಾಡಿಕೊಳ್ಳಲಾಗುವುದು ಎಂದು ಕರ‍್ಮಿಕ ಸಚಿವ ಪರಮೇಶ್ವರ ನಾಯಕ್ ತಿಳಿಸಿದರು.

ಶಹಾಬಾದನಲ್ಲಿ ಮುಚ್ಚಿರುವ ಇಎಸ್ಐ ಆಸ್ಪತ್ರೆಯನ್ನು ಪುನಶ್ಚೇತನಗೊಳಿಸಲು ಇಎಸ್ಐ ಕರ‍್ಪೋರೇಶನ್ಗೆ ಮನವಿ ಸಲ್ಲಿಸಲಾಗಿದೆ. ಇಷ್ಟರಲ್ಲಿಯೇ ಹಣ ಬಿಡುಗಡೆಯಾಗಲಿದೆ, ಆಗ ಇಲ್ಲಿ ಬೇಕಾಗುವ ಸೌಲಭ್ಯಗಳನ್ನು ನೀಡುವ ಮೂಲಕ ಕರ‍್ಮಿಕರ ಆರೋಗ್ಯ ಸೇವೆಗೆ ಬಳಕೆ ಮಾಡಲಾಗುವುದು ಎಂದರು.

ಇಲ್ಲಿನ ಸರಕಾರಿ ಮಹಿಳಾ ಐಟಿಐ ಕಾಲೇಜಿಗೆ ಭೇಟಿ ಅಲ್ಲಿನ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಎಸ್ಐ ಆಸ್ಪತ್ರೆಗಳಲ್ಲಿ ಅನೇಕ ಸಮಸ್ಯೆಗಳು ಇರುವುದು ಗಮನಕ್ಕೆ ಬಂದಿದೆ. ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆ ಇದ್ದು, ಕ್ರಮೇಣವಾಗಿ ಪರಿಹರಿಸಲಾಗುವುದು ಎಂದರು.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಬಳ್ಳಾರಿಗಳಲ್ಲಿ ಮಲ್ಟಿ ಟ್ರೇಡ್ ಸಿಸ್ಟಂ ಜಾರಿಗೊಳಿಸಲಾಗುವುದು. ಹೊಸ ಕರ‍್ಸಗಳನ್ನು ಆರಂಭಿಸಲಾಗುವುದು. ಅದರಲ್ಲಿ ವಿಶೇಷವಾಗಿ ಫ್ಯಾಷನ್ ಡಿಸೈನ್ ಮತ್ತು ಡ್ರೆಸ್ ಮೇಕೆಂಗ್ ಕರ‍್ಸಗಳನ್ನು ಆರಂಭಿಸಲಾಗುವುದೆಂದರು.

ಇಲ್ಲಿನ ಬಾಲಕರ ಐಟಿಐ ಕಾಲೇಜಿನ ಕಟ್ಟಡದ ದುರಸ್ತಿ ಕಾಮಗಾರಿಗೆ 1.50 ಕೋಟಿ ರೂ.ಮಂಜೂರು ಆಗಿದೆ.ಈಗ 50 ಲಕ್ಷ ರೂಪಾಯಿ ಬಿಡುಗಡೆಯಾಗಿದೆ, ಇಷ್ಟರಲ್ಲಿಯೇ ಉಳಿದ ಹಣವು ಬಿಡುಗಡೆ ಮಾಡಿಸಿ ಕೆಲಸ ಮುಗಿಸುವುದಾಗಿ ಹೇಳಿದರು.

Related