ರಮೇಶ್ ಬಂಡಿಸಿದ್ದೇಗೌಡಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

ರಮೇಶ್ ಬಂಡಿಸಿದ್ದೇಗೌಡಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

ಮಂಡ್ಯ: ನನ್ನ ತಂದೆಗೆ ಈಗಾಗಲೇ ಆರು ವರ್ಷದಲ್ಲಿ ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿದೆ ಹಾಗಂತ ಹೇಳಿ ನಾನು ಅನುಕಂಪದ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ನನ್ನ ತಂದೆಗೆ ಮತ ಹಾಕಿ ಎಂದು ನಾನು ಕೇಳುವುದಿಲ್ಲವೆಂದು ಕಾಂಗ್ರೆಸ್ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆ ಸಂದರ್ಭ ಎಂದು ನಾವು ಸುಳ್ಳು ಹೇಳಿಕೊಂಡು ಬದುಕುತ್ತಿಲ್ಲ. ಸುಳ್ಳು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲ್ಲ. ನಾವು ಅದನ್ನೆಲ್ಲ ಪ್ರೂವ್‌ ಮಾಡಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಬಂದು ಇಲ್ಲಿ ಸ್ಪರ್ಧೆ ಮಾಡ್ತಿರೋದು ಅವರಿಗೆ ಸಹಿಸಲಾಗ್ತಿಲ್ಲ, ಹಾಗಾಗಿ ಈ ರೀತಿ ಲಘುವಾದ ಹೇಳಿಕೆ‌ ನೀಡ್ತಿದ್ದಾರೆ, ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರವನ್ನು ನೀಡ್ತಾರೆ ಎಂದು ಹೇಳಿದರು.

ಜಿಲ್ಲೆಯ ಹಾಗೂ ರಾಜ್ಯದ ಜನರು ನೋಡುತ್ತಾ ಇದ್ದಾರೆ. ಮತದಾರ ತಂದೆ-ತಾಯಿಗಳ ಕೈಯಲ್ಲಿ ಇದಕ್ಕೆ ಉತ್ತರ ನೀಡುವ ಶಕ್ತಿ ಇದೆ. ನಾವು ಮೊದಲಿಗೆ ಭಾರತೀಯರು, ಕನ್ನಡಿಗರು. ಕುಮಾರಣ್ಣ ಎಲ್ಲೇ ಹೋಗಿ ಸ್ಪರ್ಧೆ ಮಾಡಲು ಈ ರಾಜ್ಯದ ಜನರು ಕೊಟ್ಟಿರುವ ಶಕ್ತಿ. ಜನರು ಕುಮಾರಣ್ಣನ ಸ್ಪರ್ಧೆ ನಿರ್ಧಾರ ಮಾಡ್ತಾರೆ ಎಂದರು.

 

Related